×
Ad

ಬೀದರ್‌| 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಶಾಚರಣೆ ಕಾರ್ಯಕ್ರಮ

Update: 2026-01-20 20:12 IST

ಭಾಲ್ಕಿ : ರಸ್ತೆಯ ಮೇಲೆ ಓಡಾಡುವಾಗಿ ಸುರಿಕ್ಷಿತವಾಗಿ ಸಂಚಾರ ಮಾಡಬೇಕು ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಹಮ್ಮದ್‌ ಜಾಫರ್ ಸಾದಿಕ್ ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಾರ್ಯಾಲಯದಲ್ಲಿ ಮಂಗಳವಾರ ನಡೆದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಶಾಚರಣೆ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದ ಮಹಮ್ಮದ್‌ ಜಾಫರ್ ಸಾದಿಕ್, ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಪಾಲಿಸುತ್ತಾ, ವಾಹನ ಚಲಾಯಿಸುವಾಗ ಮೊಬೈಲ್ ಬಳಸದೇ, ಹೆಲ್ಮಟ್ ಮತ್ತು ಸೀಟ್ ಬೆಲ್ಟ್‌ಗಳನ್ನು ಧರಿಸಿ ಸುರಕ್ಷಿತವಾಗಿ ಸಂಚಾರ ಮಾಡಬೇಕು. ನೀವು ವಾಹನದಲ್ಲಿ ಮನೆಯಿಂದ ಹೊರಬಂದಾಗ ನಿಮ್ಮ ಮನೆಯವರೆಲ್ಲರೂ ನಿಮ್ಮ ಜೊತೆ ಇದ್ದಾರೆ ಎಂದು ತಿಳಿದುಕೊಂಡು ಸುರಕ್ಷಿತವಾಗಿ ಪ್ರಯಾಣ ಮಾಡಬೇಕು ಎಂದು ತಿಳಿಸಿದರು.

ಪ್ರಾದೇಶಿಕ ಸಾರಿಗೆ ಕಚೇರಿಯ ವ್ಯವಸ್ಥಾಪಕ ಪ್ರಫುಲ್‌ ಕುಮಾರ್ ಮಾತನಾಡಿ, ವಾಹನದ ಜೊತೆ ಪ್ರಯಾಣ ಮಾಡುವಾಗ ವಾಹನದ ದಾಖಲಾತಿಗಳು ತಮ್ಮ ಜೊತೆಯಲ್ಲಿ ಸಮರ್ಪಕವಾಗಿ ಇಟ್ಟುಕೊಂಡಿರಬೇಕು ಎಂದರು.

ಈ ಸಂದರ್ಭದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯ ಸಿಬ್ಬಂದಿ ಮಹಾದೇವ್, ಪ್ರಮುಖರಾದ ಮುರಳಿ, ದತ್ತಗಿರಿ, ಉಷಾಲ್, ಶಿವು ಹಾಗೂ ದಿಲೀಪ್ ಸೇರಿಕಾರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News