Bidar | ಅತಿಥಿ ಶಿಕ್ಷಕರು, ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
ಬೀದರ್ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ನಗರದ ಚೌಬಾರಾದ ಜಾಮಿಯಾ ಮಸ್ಜಿದ್ ಹತ್ತಿರವಿರುವ ಅಲ್ಪಸಂಖ್ಯಾತರ ಮಹಿಳಾ ಪದವಿ ಪೂರ್ವ ಕಾಲೇಜು (ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗ) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ 2026-27ನೇ ಶೈಕ್ಷಣಿಕ ಸಾಲಿಗೆ ಒಂದು ವರ್ಷಕ್ಕೆ ತಾತ್ಕಾಲಿಕವಾಗಿ ಅನ್ವಯಿಸುವಂತೆ ಅತಿಥಿ ಶಿಕ್ಷಕರು, ಉಪನ್ಯಾಸಕರನ್ನು ಅಯ್ಕೆ ಮಾಡಲು ಅರ್ಹರಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಷಯವಾರು ಖಾಲಿ ಇರುವ ಹುದ್ದೆಗಳ ವಿವರ :
ಭೌತಶಾಸ್ತ್ರ(01), ರಸಾಯನಶಾಸ್ತ್ರ (01), ಜೀವಶಾಸ್ತ್ರ (01), ಗಣಕಯಂತ್ರಶಾಸ್ತ್ರ (01), ಅರ್ಥಶಾಸ್ತ್ರ(01), ವ್ಯವಹಾರ ಅಧ್ಯಾಯನ ಶಾಸ್ತ್ರ (01), ಲೆಕ್ಕಶಾಸ್ತ್ರ (01), ರಾಜ್ಯಶಾಸ್ತ್ರ (01), ಸಮಾಜಶಾಸ್ತ್ರ (01), ಕನ್ನಡ (01) ಹಾಗೂ ಹಿಂದಿ (01) ಸೇರಿದಂತೆ ಒಟ್ಟು 11 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಆಸಕ್ತರು ನಗರದ ಜಾಮಿಯಾ ಮಸ್ಜಿದ್ ಹತ್ತಿರವಿರುವ ಅಲ್ಪಸಂಖ್ಯಾತರ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಜಿ ಪಡೆದು ಎಲ್ಲಾ ಧೃಡೀಕೃತ ದಾಖಲೆಗಳೊಂದಿಗೆ ಮೇ 30ರ ಒಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರ ಮೊಬೈಲ್ : 78921 88513 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.