×
Ad

ಬೀದರ್ | ‘ಎಚ್ಚರ ! ಪ್ರಜಾತಂತ್ರ ಕೊಲ್ಲುವ ಅಸ್ತ್ರ ಎಸ್‌ಐಆರ್’ ಪುಸ್ತಕ ಬಿಡುಗಡೆ

Update: 2026-01-28 00:02 IST

ಬೀದರ್ : ಎಸ್‌ಐಆರ್ (ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ) ಪ್ರಜಾತಂತ್ರಕ್ಕೆ ಮಾರಕವಾಗಿರುವ ಕ್ರಮವೆಂದು ಖಂಡಿಸಿ, ಎಸ್‌ಐಆರ್ ವಿರೋಧಿ ಜನಾಂದೋಲನ ಸಮಿತಿಯಿಂದ ‘ಎಚ್ಚರ! ಪ್ರಜಾತಂತ್ರ ಕೊಲ್ಲುವ ಅಸ್ತ್ರ ಎಸ್‌ಐಆರ್’ ಪುಸ್ತಕ ಬಿಡುಗಡೆ ಮಾಡಲಾಯಿತು.

ನಗರದ ಕನ್ನಡ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಮಂಗಳವಾರ ಶ್ರೀ ಚನ್ನಬಸವ ಮಹಾಸ್ವಾಮಿಗಳು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಮತದಾನ ಹಕ್ಕು ನಾಗರಿಕರಿಗೆ ರಾಜಕೀಯ ಸಮಾನತೆ, ಗೌರವ ಹಾಗೂ ಘನತೆ ನೀಡುವ ಮೂಲಭೂತ ಹಕ್ಕಾಗಿದೆ. ಎಸ್‌ಐಆರ್ ಎಂಬ ಕ್ರಮ ಬಡ, ಅಶಿಕ್ಷಿತ, ಅಲೆಮಾರಿ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮತದಾನದ ಹಕ್ಕನ್ನು ಕುಂಠಿತಗೊಳಿಸುವ ಷಡ್ಯಂತ್ರವಾಗುವ ಆತಂಕವಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಇಲ್ಲಿವರೆಗೆ ಮತದಾರರ ಪಟ್ಟಿಯ ವಿಶೇಷ ಅಥವಾ ಸಂಕ್ಷಿಪ್ತ ಪರಿಷ್ಕರಣೆ ಮಾತ್ರ ನಡೆಯುತ್ತಿತ್ತು. 2003ರ ನಂತರ ಇದೇ ಮೊದಲ ಬಾರಿಗೆ ವಿಶೇಷ ತೀವ್ರ ಪರಿಷ್ಕರಣೆ ಎಂಬ ಹೊಸ ಕ್ರಮ ಜಾರಿಗೊಳಿಸಲಾಗಿದೆ. ಇದು ಪ್ರಜಾತಂತ್ರದ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಪ್ರಜಾತಂತ್ರ ರಕ್ಷಣೆಗೆ ಜನಜಾಗೃತಿ ಅತ್ಯಗತ್ಯವಾಗಿದ್ದು, ಎಸ್‌ಐ ರ್ ವಿರುದ್ಧ ಸಂಘಟಿತ ಹೋರಾಟ ಮುಂದುವರಿಸಲಾಗುವುದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪೂಜ್ಯ ಭಂತೇ ಜ್ಞಾನಸಾಗರ್, ಫಾದರ್ ಕ್ಲೇರಿ ಡಿಸೋಜಾ (ಸೇಕ್ರೆಡ್ ಹಾರ್ಟ್ ಚರ್ಚ್), ಮೊಹಮ್ಮದ್ ಮೋನಿಶ್ ಕಿರ್ಮಾನಿ (ಮೌಲಾನಾ ಖತೀಬ್, ಅಲ್ ಅಮೀನ್ ಮಸೀದಿ), ಸತ್ಯದೇವಿ ಮಾತಾಜಿ (ಬಸವ ಮಂಟಪ್) ಸೇರಿದಂತೆ ಸರ್ವಧರ್ಮಗಳ ಧಾರ್ಮಿಕ ಮುಖಂಡರು ಸಾನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಎಸ್‌ಐಆರ್ ವಿರೋಧಿ ಜನಾಂದೋಲನ ಸಮಿತಿಯ ಸಂಚಾಲಕ ಶ್ರೀಕಾಂತ್ ಸ್ವಾಮಿ, ಸಮಿತಿಯ ಸದಸ್ಯರಾದ ಅಬ್ದುಲ್ ಮನ್ನಾನ್ ಸೇಠ್, ಮಕ್ಸೂದ್ ಚಂದಾ, ಮಹಮ್ಮದ್ ನಿಜಾಮುದ್ದೀನ್, ವಿಜಯಕುಮಾರ್, ಮಂಜುಳಾ, ವಿನಯಕುಮಾರ್ ಮಾಳಗೆ, ಮಹೇಶ್ ಗೋರ್ನಾಳಕರ್, ಬಸವರಾಜ್ ಮಾಳಗೆ, ಸಂತೋಷ್ ಜೋಳದಪಕಾ, ಅಮೃತರಾವ್ ಚಿಮಕೋಡೆ, ಓಂಪ್ರಕಾಶ್ ರೋಟ್ಟೆ ಹಾಗೂ ಜಗದೀಶ್ವರ್ ಬಿರಾದಾರ್ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News