ಬೀದರ್: ಸ್ಕೂಟಿ ಮತ್ತು ಶಾಲೆಯ ವಾಹನದ ನಡುವೆ ಢಿಕ್ಕಿ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಹಲಬರ್ಗಾ–ತರನಳ್ಳಿ ರಸ್ತೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಮೃತ ಮಹಿಳೆಯನ್ನು ಹಲಬರ್ಗಾ ಗ್ರಾಮದ ನಿವಾಸಿ ಜಯಶ್ರೀ ಮೂಲಗೆ ಎಂದು ಗುರುತಿಸಲಾಗಿದೆ.

ಜಯಶ್ರೀ ಅವರು ಪತಿ ಶರಣಪ್ಪ ಅವರೊಂದಿಗೆ ತರನಳ್ಳಿ ಗ್ರಾಮದ ಸಮೀಪವಿರುವ ತಮ್ಮ ಹೊಲಕ್ಕೆ ತೆರಳಿ, ಸ್ಕೂಟಿಯಲ್ಲಿ ವಾಪಸ್ ಬರುತ್ತಿದ್ದರು. ಈ ವೇಳೆ ಹಲಬರ್ಗಾ ಕಡೆಯಿಂದ ಬಂದ ಶಾಲೆಯ ವಾಹನ ಹಾಗೂ ಅವರ ಸ್ಕೂಟಿ ನಡುವೆ ಢಿಕ್ಕಿ ಸಂಭವಿಸಿದೆ. ಢಿಕ್ಕಿಯ ರಭಸಕ್ಕೆ ಜಯಶ್ರೀ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆ ಧನ್ನೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor