ಹುಮನಾಬಾದ್ | ಡಾ.ರೇವಣ್ಣಸಿದ್ದಯ್ಯ ಹಿರೇಮಠ್ಗೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಹುಮನಾಬಾದ್: ತಾಲೂಕು ಆಡಳಿತ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನೀಡಲಾಗುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಡಾ. ರೇವಣಸಿದ್ಧ ಹಿರೇಮಠ ಅವರು ಆಯ್ಕೆಯಾಗಿದ್ದಾರೆ.
ಹಸಿದವರಿಗೆ ನಿರಂತರವಾಗಿ ಅನ್ನ ನೀಡುವ ದಾಸೋಹ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಡಾ. ರೇವಣಸಿದ್ಧಯ್ಯ ಹಿರೇಮಠ ಮತ್ತು ಅವರ ಪತ್ನಿ ಸಾಕ್ಷಿ ದಂಪತಿಗಳ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ಘೋಷಿಸಲಾಗಿದೆ. ಡಾ. ರೇವಣಸಿದ್ಧ ಹಿರೇಮಠ ಅವರು ಸಮಾಜಸೇವೆ, ಹಾಸ್ಯ, ಸಂಗೀತ ಹಾಗೂ ದಾಸೋಹ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನ.1ರಂದು ನಡೆಯುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಹಸಿದವರ ಹೊಟ್ಟೆ ತುಂಬಿಸುವ ಪುಣ್ಯಕಾರ್ಯದ ಜೊತೆಗೆ ಸಮಾಜಮುಖಿ ಚಟುವಟಿಕೆಗಳು, ಹಾಸ್ಯ ಹಾಗೂ ಸಂಗೀತದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಅವರ ಸೇವೆ ಶ್ಲಾಘನೀಯ ಎಂದು ತಾಲೂಕು ಆಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್ ಮೆಚ್ಚುಗೆ ವ್ಯಕ್ತಪಡಿಸಿವೆ.