×
Ad

ಬೀದರ್| ಶಿಕ್ಷಕನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ: ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಒತ್ತಾಯ

Update: 2025-12-04 00:35 IST

ಬೀದರ್ : ಕಮಲನಗರ್ ತಾಲೂಕಿನ ಕೋಟಗ್ಯಾಳ್ ಗ್ರಾಮದ ಸರಕಾರಿ ಶಾಲೆ ಶಿಕ್ಷಕ ನಾಗೇಶ್ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಜಿ ರಂಗೇಶ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರ ವಿರುದ್ಧ ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಔರಾದ್ ತಾಲೂಕು ಘಟಕದಿಂದ ಒತ್ತಾಯಿಸಲಾಗಿದೆ.

ಕಮಲನಗರ್ ತಹಸೀಲ್ದಾರ್ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ನಾಗೇಶ ಅವರು ಕೋಟಗ್ಯಾಳ ಗ್ರಾಮದಲ್ಲಿ ನಿಷ್ಠಾವಂತ ಶಿಕ್ಷಕರಾಗಿದ್ದು, ಶಿಕ್ಷಣಾ ಇಲಾಖೆಯಲ್ಲಿ ಸಿ ಆರ್ ಪಿ ಆಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಇವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಿ ರಂಗೇಶ್ ಅವರು ಅವಾಚ್ಯವಾಗಿ ಬೈದು ನಿಂದಿಸಿ ಮಾನ ಹರಾಜು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಯವರು ತಾಲೂಕಿನ ಶಿಕ್ಷಣಾ ಇಲಾಖೆಗೆ ಹಾಗೂ ನೌಕರರಿಗೆ ಮಾರ್ಗದರ್ಶಕರಾಗಿ ನೆಡಸಿಕೊಂಡು ಹೋಗುವ ಒಬ್ಬ ಅಧಿಕಾರಿಯಾಗಿರಬೇಕು. ಆದರೆ ಇವರು ಒಬ್ಬ ಶಿಕ್ಷಕನಿಗೆ ದೂರವಾಣಿಯ ಕರೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೈದಿದ್ದಾರೆ. ಶಾಲೆಗೆ ಬಂದು ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಈ ತರಹದ ಮಾತುಗಳು ತಾಲೂಕ ಪಟ್ಟದ ಅಧಿಕಾರಿಗೆ ಶೋಭೆ ತರುವುದಿಲ್ಲ. ಇದರಿಂದಾಗಿ ಅವಮಾನಕ್ಕೋಳಗಾದ ಶಿಕ್ಷಕ ಮಾನಸಿಕವಾಗಿ ಕುಂದಿದ್ದು, ಖಿನತೆಗೆ ಒಳಗಾಗಿದ್ದಾರೆ ಎಂದು ದೂರಲಾಗಿದೆ.

ಆದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಿ ರಂಗೇಶ್ ಅವರ ವಿರುದ್ಧ ತನಿಖೆಗೆ ಒಳಪಡಿಸಿ ತಪ್ಪಿಸ್ಥರು ಎಂದು ಕಂಡು ಬಂದಲ್ಲಿ ಇವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಔರಾದ್ ತಾಲೂಕು ಅಧ್ಯಕ್ಷ ಬಸವರಾಜ್ ಪಾಟೀಲ್, ಬಸವರಾಜ್ ಮಹಾಜನ್, ಕೇದಾರ್ ದೇವಪ್ಪ ಹಾಗೂ ನಿಂದನೆಗೋಳಗಾದ ನಾಗೇಶ್ ಸಂಗಮ್ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News