ಬೀದರ್ | ಗಣೇಶ ಉತ್ಸವದ ವೇಳೆ ಜಿಲ್ಲೆಯಲ್ಲಿ ಕರ್ಕಶ ಶಬ್ದ ಮಾಡುವ ಡಿಜೆ ಬಳಸಬಾರದು : ಎಸ್ಪಿ ಪ್ರದೀಪ್ ಗುಂಟಿ
ಬೀದರ್ : ಗಣೇಶ ಉತ್ಸವ ನಿಮಿತ್ಯ ಜಿಲ್ಲೆಯಲ್ಲಿ ಕರ್ಕಶ ಶಬ್ದ ಮಾಡುವ ಡಿಜೆ ಅಥವಾ ಸೌಂಡ್ ಸಿಸ್ಟಮ್ ಬಳಸಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಆ. 27 ರಿಂದ ಸೆ.6ರ ವರೆಗೆ ಜಿಲ್ಲೆಯಲ್ಲಿ ಗಣೇಶ ಉತ್ಸವ ನಿಮಿತ್ಯ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ವಿಸರ್ಜನೆ ನಡೆಯಲಿದ್ದು, ಜಿಲ್ಲೆಯ ಎಲ್ಲಾ ಗಣೇಶ ಮಂಡಿಳಿಯವರು ಅತಿಹೆಚ್ಚು ಕರ್ಕಶ ಶಬ್ದ ಮಾಡುವ ಸೌಂಡ್ ಸಿಸ್ಟಮ್ ಗಳು ಹೊರ ರಾಜ್ಯಗಳಿಂದ ಬುಕ್ ಮಾಡಿ ತರುತ್ತಿರುವುದರ ಬಗ್ಗೆ ಮಾಹಿತಿ ಇದೆ. ಹೊರ ರಾಜ್ಯಗಳಿಂದ ಬುಕ್ ಮಾಡಿ ತರುವ ಕರ್ಕಶ ಶಬ್ದ ಮಾಡುವ ಸೌಂಡ್ ಸಿಸ್ಟಮ್ ಗಳನ್ನು ಜಿಲ್ಲೆಯ ಹೊರ ವಲಯದಲ್ಲೇ ನಿಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಗಣೇಶ ಮಂಡಳಿಯವರು ಅನವಶ್ಯಕವಾಗಿ ಹಣ ಖರ್ಚು ಮಾಡಿ ನಷ್ಟ ಮಾಡಿಕೊಳ್ಳಬಾರದು. ಗಣೇಶ ಹಬ್ಬವು ಶಾಂತಿಯುತ ಹಾಗೂ ಸೌಹಾರ್ದತೆಯಿಂದ ಆಚರಣೆ ಮಾಡಬೇಕು ಎಂದು ಜಿಲ್ಲೆಯ ಎಲ್ಲ ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದಾರೆ.