ಡಿ.6ರಂದು ಬುದ್ದ ಭಾರತ ನಿರ್ಮಾಣ ಸಂಕಲ್ಪ ಸಮಾವೇಶ: ಅನಿಲ್ ಬೆಲ್ದಾರ್
ಬೀದರ್ : ಡಿ.6 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ವಿಶ್ವಜ್ಞಾನಿ, ಮಹಾಮಾನವತವಾದಿ, ಸಂವಿಧಾನ ಶಿಲ್ಪಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇ ಪರಿನಿಬ್ಬಾಣ ದಿನಾಚರಣೆ ಪ್ರಯುಕ್ತ 'ಬುದ್ಧ ಭಾರತ ನಿರ್ಮಾಣ ಹಾಗೂ ಸಂಕಲ್ಪ ಸಮಾವೇಶ' ಆಯೋಜಿಸಲಾಗಿದೆ ಎಂದು ದಲಿತ ಮುಖಂಡ ಅನಿಲ್ ಬೆಲ್ದಾರ್ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನಿಲ್ ಬೆಲ್ದಾರ್, ಕಾರ್ಯಕ್ರಮದಲ್ಲಿ ಅಣದೂರಿನ ವೈಶಾಲಿನಗರದ ಭಂತೆ ಜ್ಞಾನಸಾಗರ್ ಥೇರೊ, ಬೌದ್ದ ಭಿಕ್ಕುಗಳು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಪೌರಾಡಳಿತ ಸಚಿವ ರಹೀಮ್ ಖಾನ್, ಸಂಸದ ಸಾಗರ್ ಖಂಡ್ರೆ, ಮಾಜಿ ಸಚಿವರಾದ ರಾಜಶೇಖರ್ ಪಾಟೀಲ್, ಬಂಡೆಪ್ಪ ಖಾಶೆಂಪುರ್, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ.ಪಂ ಸಿಇಒ ಗಿರೀಶ್ ಬದೋಲೆ, ಎಸ್‌ಪಿ ಪ್ರದೀಪ್ ಗುಂಟಿ ಭಾಗವಹಿಸುವರು. ಖ್ಯಾತ ಚಿಂತನಕಾರ್ತಿ ಕೆ.ನೀಲಾ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಜಿಲ್ಲೆಯ ಇತರೆ ಜನಪ್ರತಿನಿಧಿಗಳು, ಅಧಿಕಾರಿಗಳು, ಬೌದ್ದ ಉಪಾಸಕ, ಉಪಾಸಕಿಯರು, ಸಮಾಜದ ಚಿಂತಕರು, ಅಂಬೇಡ್ಕರ್ ಅನುಯಾಯಿಗಳು, ಅಭಿಮಾನಿಗಳು, ದಲಿತ ಮುಖಂಡರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಹೇಳಿದರು.
69ನೇ ಪರಿನಿಬ್ಬಾಣ ಕಾರ್ಯಕ್ರಮದ ಅಧ್ಯಕ್ಷ ರಮೇಶ್ ಡಾಕುಳಗಿ ಮಾತನಾಡಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಶೋಷಿತ ಜನ ಸಮುದಾಯಗಳ ವಿಮೋಚನೆಗಾಗಿ ತಮ್ಮ ಬದುಕಿನ ಕೊನೆಯ ಕ್ಷಣದವರೆಗೂ ಹೋರಾಡಿ ತಮ್ಮ ಜೀವವನ್ನೇ ಸಮರ್ಪಿಸಿದ್ದಾರೆ. ಅಸ್ಪಶ್ಯತೆ, ಅಪಮಾನ, ಕೀಳರಿಮೆ, ಜಾತಿ ಪದ್ದತಿ, ಲಿಂಗಬೇಧ, ಧಾರ್ಮಿಕ ಮೂಢ ನಂಬಿಕೆ, ಭ್ರಷ್ಟಚಾರ, ಅಸಮಾನತೆಯಿಂದ ನೊಂದು, ಅಂಬೇಡ್ಕರ್ ಅವರು ಅ. 14, 1956ರಂದು ನಾಗಪುರದಲ್ಲಿ ತಮ್ಮ 5 ಲಕ್ಷ ಅನುಯಾಯಿಗಳೊಂದಿಗೆ ಬೌದ್ಧಧಮ್ಮ ಸ್ವೀಕರಿಸಿದ್ದರು ಎಂದು ವಿವರಿಸಿದರು.
ಡಾ. ಅಂಬೇಡ್ಕರ್ ಅವರು ಕಂಡ ಸಮಾನತೆಯ ಕನಸನ್ನು ನನಸು ಮಾಡಲು ನಾವೆಲ್ಲರೂ ಸೇರಿ ಸಂಕಲ್ಪ ಮಾಡೋಣ. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಅನುಯಾಯಿಗಳು, ದಲಿತ, ಶೋಷಿತ, ಹಿಂದುಳಿದ ವರ್ಗದವರು, ಧಾರ್ಮಿಕ ಅಲ್ಪಸಂಖ್ಯಾತರು, ಜನಪರ ಸಂಘಟನೆಯ ಮುಖಂಡರು ಹಾಗೂ ಎಲ್ಲಾ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಮಹೇಶ್ ಗೋರನಾಳಕರ್, ಸಮಿತಿಯ ಪದಾಧಿಕಾರಿಗಳಾದ ಬಾಬುರಾವ್ ಪಾಸ್ವಾನ್, ಡಾ.ಕಾಶಿನಾಥ್ ಚಲ್ವಾ, ಶ್ರೀಪತರಾವ್ ದೀನೆ, ರಮೇಶ್ ಮಂದಕನಳ್ಳಿ, ಶಿವಕುಮಾರ್ ನೀಲಿಕಟ್ಟಿ, ಪ್ರಕಾಶ್ ಮಾಳಗೆ, ಸಂದೀಪ್ ಕಾಂಟೆ ಹಾಗೂ ಪ್ರದೀಪ್ ನಾಟೇಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.