×
Ad

ಬೀದರ್‌| ದುಬಲಗುಂಡಿ ಗ್ರಾಮ ಪಂಚಾಯತ್ ಅಧ್ಯಕ್ಷರ ಸದಸ್ಯತ್ವ ರದ್ದು ಪಡಿಸುವಂತೆ ಜಿ.ಪಂ.ಸಿಇಒಗೆ ಮನವಿ

Update: 2026-01-04 22:16 IST

ಹುಮನಾಬಾದ್ : ತಾಲ್ಲೂಕಿನ ದುಬಲಗುಂಡಿ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ ಭೋಜಗುಂಡಿ ಅವರು 11 ತಿಂಗಳಿಂದ ಇಲ್ಲಿವರೆಗೂ ಯಾವುದೇ ಸಾಮಾನ್ಯ ಸಭೆ ನಡೆಸದೆ ಬೇಜವಾಬ್ದಾರಿ ತೋರಿದ್ದಾರೆ ಎಂದು ಆರೋಪಿಸಿ, ಅವರ ಸದಸ್ಯತ್ವ ರದ್ದುಪಡಿಸಬೇಕು ಎಂದು ದುಬಲಗುಂಡಿ ಗ್ರಾಮ ಪಂಚಾಯತ್ ಸದಸ್ಯ ವಿಜಯಕುಮಾರ್ ನಾತೆ ಅವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಿರೀಶ್ ಬದೋಲೆಗೆ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.  

ಗ್ರಾಮ ಸ್ವರಾಜ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ರ ಪ್ರಕರಣ 43(ಎ)(1)(ii) ರ ಮತ್ತು 48(4) ಅಡಿಯಲ್ಲಿ ಬೀದರ್‌ ಜಿಲ್ಲೆಯ ಹುಮನಾಬಾದ್‌ ತಾಲೂಕಿನ ದುಬಲಗುಂಡಿ ಗ್ರಾಮ ಪಂಚಾಯತ ಅಧ್ಯಕ್ಷ ನಾಗರಾಜ್ ಭೋಜಗೊಂಡ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಲು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಘುನಾಥ್ ಅವರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ದುಬಲಗುಂಡಿ ಗ್ರಾಮ ಪಂಚಾಯತ್‌ ಅಧ್ಯಕ್ಷನಾದ ನಂತರ 3 ಬಾರಿ ಮಾತ್ರ ಸಾಮಾನ್ಯ ಸಭೆ ಕರೆದಿದ್ದಾರೆ. 2025ರ ಜ.1ರಂದು ಇವರ ಅಧ್ಯಕ್ಷತೆಯಲ್ಲಿ ಕೊನೆ ತುರ್ತು ಸಭೆ ನಡೆದಿರುತ್ತದೆ.  ಅಧ್ಯಕ್ಷ ಹುದ್ದೆಯ ಪದಾವಧಿಯು ಪ್ರಾರಂಭದ ನಂತರ ನಡೆದ ಅನುಮೋದನೆಯ ಸಾಮಾನ್ಯ ಸಭೆ, ವಿಶೇಷ ಸಭೆ ಹಾಗೂ ತುರ್ತು ಸಭೆ ಸರಿಯಾಗಿ ಸಮಯಕ್ಕೆ ನಡೆಸಿಲ್ಲ ಎಂದು ಅವರು ಆರೋಪಿಸಿದ್ದಾರೆ.  

15ನೇ ಹಣಕಾಸು ಯೋಜನೆಯಲ್ಲಿ ಕೆಲಸ ಮಾಡದೆ ನಿಯಮಗಳು ಗಾಳಿಗೆ ತೂರಿ ಮನ ಬಂದಂತೆ ಸರಕಾರದ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ಅದೇ ರೀತಿ ಯಾವುದೇ ಅಭಿವೃದ್ಧಿ ಕೆಲಸಗಳು ಮಾಡದೇ ಸರಕಾರದ ಹಣವನ್ನು ನಕಲಿ ಬಿಲ್ಲುಗಳನ್ನು ಸೃಷ್ಟಿಸಿ ಸರಕಾರಕ್ಕೆ ಮೋಸ ಮಾಡಿರುತ್ತಾರೆ. ಅಧ್ಯಕ್ಷರ ಜೊತೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೂಡಾ ಶಾಮಿಲಾಗಿ ಅಕ್ರಮ ಮತ್ತು ಅವ್ಯವಾಹಾರದಲ್ಲಿ ತೊಡಗಿದ್ದಾರೆ. ಹಾಗಾಗಿ ಇವರಿಬ್ಬರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಗಿರೀಶ್ ಬದೋಲೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News