×
Ad

ಬೀದರ್ | ರಸಗೊಬ್ಬರ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು : ಡಾ.ಗಿರೀಶ್ ಬದೋಲೆ

Update: 2026-06-08 19:56 IST

ಬೀದರ್ : ಯಾವುದೇ ರಸಗೊಬ್ಬರವು ನಿಗದಿತ ಬೆಲೆಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು. ಹಾಗೆಯೇ ರೈತರಿಗೆ ವಿತರಿಸಿದ ರಸಗೊಬ್ಬರಕ್ಕೆ ರಸೀದಿಯನ್ನು ಕಡ್ಡಾಯವಾಗಿ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ.ಗೀರಿಶ್ ಬದೋಲೆ ಹೇಳಿದರು.

ನಗರದ ಗಾಂಧಿಗಂಜ್ ನಲ್ಲಿರುವ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಸೋಮವಾರ ಭೇಟಿ ನೀಡಿ ಕೃಷಿ ಪರಿಕರಗಳಾದ ರಸಗೊಬ್ಬರಗಳ ಲಭ್ಯತೆ, ಸಂಗ್ರಣೆ ಮತ್ತು ರೈತರಿಗೆ ವಿತರಣೆಯನ್ನು ಪರಿಶೀಲಿಸಿ ಅವರು ಮಾತನಾಡಿದರು

ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ವಿರುದ್ದ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಡಿಎಪಿ ರಸಗೊಬ್ಬರ ಕೊರತೆಯನ್ನು ನೀಗಿಸಲು ಪರ್ಯಾಯವಾಗಿ ಸಂಯುಕ್ತ ಗೊಬ್ಬರಗಳನ್ನು ಆಧುನಿಕ ತಂತ್ರಜ್ಞಾನದಿಂದ ತಯಾರಿಸಲಾದ ನ್ಯಾನೋ ಯೂರಿಯಾ, ನ್ಯಾನೋ ಡಿಎಪಿಗಳನ್ನು ಬಳಸಬೇಕು ಎಂದು ರೈತರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ಹಮ್ಮಿಕೊಳ್ಳಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕಿ ದೇವಿಕಾ.ಆರ್, ಸಹಾಯಕ ಕೃಷಿ ನಿರ್ದೇಶಕಿ ಆರತಿ ಪಾಟೀಲ್ ಹಾಗೂ ಮಂಚೇಂದ್ರನಾಥ್ ವಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News