ಬೀದರ್ | ಶಾಲಾ ಬಸ್ ಹರಿದು ಬಾಲಕಿ ಮೃತ್ಯು : ಪ್ರಕರಣ ದಾಖಲು
Update: 2025-09-06 17:15 IST
ಬೀದರ್ : ಮೈ ಮೇಲೆ ಶಾಲಾ ಬಸ್ ಹರಿದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಔರಾದ್ ತಾಲೂಕಿನ ಏಕಂಬಾ ಗ್ರಾಮದಲ್ಲಿ ಸಂಭವಿಸಿದೆ.
ಕಾವೇರಿ ಮೃತಪಟ್ಟ ಬಾಲಕಿ.
ಯುಕೆಜಿಯಲ್ಲಿ ಕಲಿಯುತ್ತಿದ್ದ ಕಾವೇರಿ ಪ್ರತಿದಿನ ಶಾಲಾ ಬಸ್ಸಿನಲ್ಲಿ ತೆರಳುತ್ತಿದ್ದರು. ಸೆ.4ರ ಮುಂಜಾನೆ 9 ಗಂಟೆ ವೇಳೆಗೆ ಶಾಲಾ ಬಸ್ಸಿನಲ್ಲಿ ಶಾಲೆಗೆ ಹೋಗಿದ್ದ ಬಾಲಕಿ ಶಾಲಾ ಆವರಣದಲ್ಲಿ ಬಸ್‌ನಿಂದ ಇಳಿಯುವಾಗ ಬಸ್ಸಿನಿಂದ ಕೆಳಗೆ ಬಿದ್ದಿದ್ದಾಳೆ. ಈ ವೇಳೆ ಬಾಲಕಿಯ ತಲೆಯ ಮೇಲೆ ಬಸ್ ಹರಿದಿದೆ. ತಕ್ಷಣವೇ ಬಾಲಕಿಯನ್ನು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ಧೃಡ ಪಡಿಸಿದ್ದಾರೆ.
"ಬಸ್‌ನಿಂದ ನನ್ನ ಮಗಳು ಕೆಳಗೆ ಇಳಿಯುವುದನ್ನು ನೋಡದೆ ಚಾಲಕ ವಾಹನವನ್ನು ಅಜಾಗರೂಕತೆ ಚಲಾಯಿಸಿದ್ದರಿಂದ ಈ ಘಟನೆ ನಡೆದಿದೆ" ಮೃತ ಬಾಲಕಿಯ ತಂದೆ ದೂರು ನೀಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಔರಾದ್ (ಬಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.