×
Ad

ಬೀದರ್ | ಮಾಂಜ್ರಾ ನದಿಯಲ್ಲಿ ಕೊಚ್ಚಿಕೊಂಡು ಹೋದ ವ್ಯಕ್ತಿ, ಮೃತದೇಹ ಪತ್ತೆ

Update: 2025-06-19 17:32 IST

ಬೀದರ್ : ನೀರು ಕುಡಿಯಲು ಮಾಂಜ್ರಾ ನದಿಗೆ ಇಳಿದ ವ್ಯಕ್ತಿಯೋರ್ವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಘಟನೆ ಭಾಲ್ಕಿ ತಾಲೂಕಿನ ತಳವಾಡ್ (ಎಂ) ಗ್ರಾಮದಲ್ಲಿ ನಡೆದಿದೆ.

ವಿಲಾಸ್ ಗಣಪತರಾವ್ ಪಾಂಚಾಳ್ (65) ಮೃತರು. ನದಿಯ ಪಕ್ಕದಲ್ಲಿನ ಹೊಲದಲ್ಲಿ ಕೆಲಸದ ಬಳಿಕ ನೀರು ಕುಡಿಯಲೆಂದು ನದಿಗೆ ಇಳಿದಿದ್ದ ವಿಲಾಸ್ ಗಣಪತರಾವ್ ಪ್ರವಾಹ ಹೆಚ್ಚಾಗಿದ್ದರಿಂದ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಆ ಬಳಿಕ ಅವರ ಮೃತದೇಹ ಪತ್ತೆಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News