Bidar | ಎಸ್ಟಿ ಟೋಕರೆ ಕೋಳಿ ಸಮಾಜ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ
ಬೀದರ್: ಹುಮನಾಬಾದ್ ತಾಲೂಕಿನ ಎಸ್ಟಿ ಟೋಕರೆ ಕೋಳಿ ಸಮಾಜ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರುತಿ ಮಾಸ್ಟರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುಮನಾಬಾದ್ ತಾಲೂಕು ಅಧ್ಯಕ್ಷರಾಗಿ ಸಂತೋಷ್ ಸಂಗಮ್, ಉಪಾಧ್ಯಕ್ಷರಾಗಿ ವೆಂಕಟ ಪಾಟೀಲ್ ಹಾಗೂ ಚನ್ನಬಸಪ್ಪ ಪಾಟೀಲ್, ಪ್ರಧಾನ ಕಾರ್ಯದರ್ಶಿಯಾಗಿ ನರಸಪ್ಪ ಅರ್ಕಿ, ಸಹ ಕಾರ್ಯದರ್ಶಿಯಾಗಿ ಪರಮೇಶ್ವರ್ ನೈಕೋಡೆ, ಕೋಶಾಧ್ಯಕ್ಷರಾಗಿ ಜಗದೀಶ್ ಎಲಡಗಿ, ಸಂಘಟನಾ ಕಾರ್ಯದರ್ಶಿಯಾಗಿ ಶಿವರಾಜ್ ಪಾಟೀಲ್, ಮಾಧ್ಯಮ ಸಂಘಟನಾಕಾರರಾಗಿ ರಾಮ್ ನಲ್ಲೆ ಹಾಗೂ ವಕ್ತಾರರಾಗಿ ನಾಗೇಂದ್ರ ಔಂಟಿ ಅವರನ್ನು ನೇಮಕ ಮಾಡಲಾಗಿದೆ.
ಸದಸ್ಯರಾಗಿ ಮಲ್ಲಿಕಾರ್ಜುನ್ ಕನಕಟ್ಟೆ, ಬಿ. ವಿನೋದ್ ಬಲವಂತ್, ಸೈಬಣ್ಣ ನಂದಿ, ಚಂದ್ರಕಾಂತ್ ಜಮಾದಾರ್, ಪ್ರಕಾಶ್ ಅಂಕಲಗಿ, ರಾಕೇಶ್ ಧನ್ನೂರ್, ಕೆ. ಶರಣು ಉಡಬಾಳ್, ಅಂಕುಶ್ ಜಮಾದಾರ್, ವೆಂಕಟ್ ಜಮಾದಾರ್, ಶಾಂತಕುಮಾರ್ ಪೋತರಾಜ್, ಕಿಶೋರ್ ನಟ್ಟಿ, ಬಂಡೆಪ್ಪ ಕೌಡಿಯಾಳ್ ಹಾಗೂ ಪ್ರಕಾಶ್ ಜಮಾದಾರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನಗರದ ನೌಬಾದ್‌ನ ಜಿಲ್ಲಾ ಟೋಕರೆ ಕೋಳಿ ಸಮಾಜ ಸಂಘದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಜಗನ್ನಾಥ್ ಜಮಾದಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಜಿಲ್ಲಾ ಉಪಾಧ್ಯಕ್ಷ ಸುನೀಲ್ ಖಾಶೆಂಪೂರ್, ಸಮಾಜದ ಮುಖಂಡರಾದ ನಂದಕುಮಾರ್ ಜಂಬಗೀಕರ್, ನಾಗಭೂಷಣ್ ಸಂಗಮ್, ಅರುಣಕುಮಾರ್ ಬಾವಗೆ, ರಾಜಪ್ಪ ಶೇರಿಕಾರ್ ಹಾಗೂ ವೀರಶೆಟ್ಟಿ ಪದ್ಮಾ ಅವರು ಸಭೆಯ ನೇತೃತ್ವ ವಹಿಸಿದ್ದರು.