×
Ad

ಬೀದರ್ | ಹುಬ್ಬಳ್ಳಿಯ ಮರ್ಯಾದೆಗೇಡು ಹತ್ಯೆ ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

Update: 2025-12-31 17:59 IST

ಬೀದರ್ : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.

ಬುಧವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಮುಖರು ಹಾಗೂ ನಾಗರೀಕರು ಸೇರಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ನಂತರ ಭಗತ ಸಿಂಗ್ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಮೂಲಕ ಸಾಗಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಬಾಬುರಾವ್ ಹೊನ್ನಾ ಅವರು ಮಾತನಾಡಿ, ಲಿಂಗಾಯತ ಸಮುದಾಯದ ಯುವತಿ ಮಾದಿಗ ಸಮುದಾಯದ ಹುಡಗನನ್ನು ಪ್ರೀತಿಸಿ ಮದುವೆಯಾಗಿದ್ದಳು. ಅವಳು ಏಳು ತಿಂಗಳ ಗರ್ಭಿಣಿಯಾಗಿದ್ದರೂ ಕೂಡ ಆಕೆಯ ತಂದೆಯೇ ಅವಳನ್ನು ಕೊಲೆ ಮಾಡಿದ್ದಾನೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಆ ಹುಡುಗನ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಅಂತರ್ಜಾತಿ ವಿವಾಹವಾಗುವವರಿಗೆ ಸರ್ಕಾರಿ ಹುದ್ದೆ, ಒಂದು ಮನೆ ಹಾಗೂ ಅವರಿಗೆ ನೀಡುವ ಹಣ 10 ಲಕ್ಷ ರೂ. ಗೆ ಏರಿಸಬೇಕು ಎಂದು ಅವರು ಒತ್ತಾಯಿಸಿದರು.

ಶೀಲಾ ಸಾಗರ್ ಅವರು ಮಾತನಾಡಿ, ಹೆತ್ತ ತಂದೆಯೇ ಗರ್ಭಿಣಿಯಾಗಿದ್ದ ತನ್ನ ಮಗಳನ್ನು ಕೊಂದಿದ್ದು ತುಂಬಾ ಭಯಾನಕವಾದ ಸಂಗತಿಯಾಗಿದೆ. ಆತ ತನ್ನ ಮಗಳನ್ನೇ ಕೊಂದಿದ್ದಾನೆ ಎಂದರೆ ಇತರರನ್ನು ಕೊಲ್ಲುವುದು ಸಹಜವಾಗಿರುತ್ತದೆ. ಇದು ಪ್ರತಿಯೊಬ್ಬರ ಕುಟುಂಬದ ಸಮಸ್ಯೆಯಾಗಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿ, ಯೋಚಿಸಬೇಕು ಎಂದರು.

ಈ ಸಂದರ್ಭದಲ್ಲಿ ಕುರೇಶಿ ಕಾನ್ಫರೆನ್ಸ್ ನ ರಾಜ್ಯಧ್ಯಕ್ಷ ನಬಿ ಖುರೇಷಿ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹಾಗೂ ರಾಜ್ಯ ಉಪಾಧ್ಯಕ್ಷ ರಾಜಕುಮಾರ್ ಮೂಲಭಾರತಿ, ಎಐಕೆಎಸ್ ಜಿಲ್ಲಾಧ್ಯಕ್ಷ ನಜೀರ್ ಅಹ್ಮದ್, ಆರ್‌ಪಿಐ ಜಿಲ್ಲಾ ಮತ್ತು ರಾಜ್ಯ ಸಂಚಾಲಕ ಮಹೇಶ್ ಗೋರನಾಳಕರ್, ಎಂ.ಡಿ ಶಫಾಯತ್ ಅಲಿ, ಜೈಶಿಲ್ ಕುಮಾರ್, ವಿರಶೇಟ್ಟಿ ವಟಂಬೆ, ಜಗನ್ನಾಥ್ ಹೊನ್ನಾ, ಮಾರುತಿ ಸೂರ್ಯವಂಶಿ, ನಿಜಾಮುದ್ದಿನ್, ರಾಜಕುಮಾರ್ ಸಿಂದೆ, ಖದಿರಮಿಯ್ಯಾ, ಪ್ರಭು ಹೊಚಕನಳ್ಳಿ, ಅರುಣ್ ಪಟೇಲ್, ಓಂಪ್ರಕಾಶ್ ರೊಟ್ಟೆ, ಜಗದೀಶ್ವರ್ ಬಿರಾದಾರ್, ಮಲ್ಲಿಕಾರ್ಜುನ್ ಚಿಟ್ಟಾ, ಸಂದೀಪ್ ಕಾಂಟೆ, ವಸಿಮ್ ಕಿರಮಣಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News