ಬೀದರ್ | ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಡಿ.ಕೆ.ಸಿದ್ರಾಮ್ ಜಾಮೀನು ರದ್ದು : ವಕೀಲ ನಾರಾಯಣ್ ಗಣೇಶ್
ನಾರಾಯಣ್ ಗಣೇಶ್
ಬೀದರ್ : ಡಿಸಿಸಿ ಬ್ಯಾಂಕ್ ಗೆ ವಂಚನೆ ಆರೋಪದಲ್ಲಿ ಬಂಧಿತರಾದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ (ಎನ್ ಎಸ್ ಎಸ್ ಕೆ) ಅಧ್ಯಕ್ಷ ಡಿ.ಕೆ ಸಿದ್ರಾಮ್ ಅವರ ಜಮೀನು ಅರ್ಜಿಯನ್ನು ಜಿಲ್ಲಾ ಜೆ ಎಂ ಎಫ್ ಸಿ ಕೋರ್ಟ್ ರದ್ದುಗೊಳಿಸಿದೆ ಎಂದು ಡಿಸಿಸಿ ಬ್ಯಾಂಕ್ ಪರ ವಕೀಲ ನಾರಾಯಣ್ ಗಣೇಶ್ ಅವರು ಹೇಳಿದ್ದಾರೆ.
ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಎಂಡಿ ಮಂಜುಳಾ ಅವರ ಪರವಾಗಿ ನಾನು ವಾದ ಮಾಡಿದ್ದೇನೆ. ಕಾರ್ಖಾನೆಯ ಗೋದಾಮಿನಲ್ಲಿನ 87 ಕೋಟಿ ರೂ. ಸಕ್ಕರೆಯನ್ನು ಅಡಮಾನವಿಟ್ಟು ಡಿಸಿಸಿ ಬ್ಯಾಂಕಿನಲ್ಲಿ ಲೋನ್ ತೆಗೆದುಕೊಳ್ಳಲಾಗಿತ್ತು. ಹಾಗೆಯೇ ಗೋದಾಮಿನಲ್ಲಿ 87 ಕೋಟಿ ರೂ. ಸಕ್ಕರೆ ಇದೆ ಎಂದು ಹೇಳಿ ಡಿಸಿಸಿ ಬ್ಯಾಂಕಿನಿಂದ ಹಣ ನವೀಕರಣಗೊಳಿಸಬೇಕು ಎಂದು ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಕೇಳಿತ್ತು. ಅಂತಹ ಸನ್ನಿವೇಶದಲ್ಲಿ 2023ರಲ್ಲಿ ಎನ್ ಎಸ್ ಎಸ್ ಕೆ ಕಾರ್ಖಾನೆಯಲ್ಲಿ ಅಡಿಟ್ ಆಗಿದೆ. ಈ ಅಡಿಟ್ ಅಲ್ಲಿ ಎನ್ ಎಸ್ ಎಸ್ ಕೆ ಸಕ್ಕರೆ ಕಾರ್ಖಾನೆಯ ಗೋದಾಮಿನಲ್ಲಿ ಸಕ್ಕರೆಯೇ ಇಲ್ಲ ಎನ್ನುವುದು ಕಂಡು ಬರುತ್ತದೆ. ಇದರಿಂದಾಗಿ ಡಿಸಿಸಿ ಬ್ಯಾಂಕಿನ ಎಂಡಿ ಅವರು ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇಂದು ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯವು ಕಾರ್ಖಾನೆಯ ಆಡಳಿತ ಮಂಡಳಿ ನೀಡದ ರೆಸ್ಯೂಲೇಷನ್ ತಪ್ಪಾಗಿದ್ದು ಹಾಗೆಯೇ ಅಡಿಟ್ ಮಾಡಿದರ ಬಗ್ಗೆಯೂ ಕೂಡ ಕುಲಂಕುಷವಾಗಿ ನೋಡಿದ ನ್ಯಾಯಾಲಯವು ಜಾಮೀನನ್ನು ರದ್ದುಗೋಳಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.