ಬೀದರ್ | ತಲೆ ಮೇಲೆ ಕಲ್ಲು ಹಾಕಿ ಪುತ್ರನಿಂದಲೇ ತಂದೆಯ ಹತ್ಯೆ
Update: 2025-05-12 22:58 IST
ಬೀದರ್ : ತಲೆ ಮೇಲೆ ಕಲ್ಲು ಹಾಕಿ ತಂದೆಯನ್ನೇ ಹತ್ಯೆಗೈದ ಘಟನೆ ಹುಲಸೂರ್ ತಾಲ್ಲೂಕಿನ ಬೇಲೂರ್ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಶಿವಕುಮಾರ್ ಕುರೆ(52) ಹಾಗೂ ಆರೋಪಿಯನ್ನು ಪುತ್ರ ರೇವಣಸಿದ್ದ (23) ಎಂದು ಗುರುತಿಸಲಾಗಿದೆ.
ಮೃತ ಶಿವಕುಮಾರ್ ದಿನಾಲೂ ಮದ್ಯ ಕುಡಿದು ಬಂದು ಮದ್ಯದ ಅಮಲಿನಲ್ಲಿ ಪತ್ನಿ ಸೇರಿದಂತೆ ಕುಟುಂಬಸ್ಥರೊಂದಿಗೆ ಅನಗತ್ಯವಾಗಿ ಗಲಾಟೆ ಮಾಡುತಿದ್ದ. ರವಿವಾರ ರಾತ್ರಿ ಸುಮಾರು 10:30 ಗಂಟೆಗೆ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಪುತ್ರ ರೇವಣಸಿದ್ದ ಮತ್ತು ತಂದೆ ಶಿವಕುಮಾರ್ ನಡುವೆ ಗಲಾಟೆ ನಡೆದಿದೆ. ಇದರಿಂದ ಬೇಸತ್ತ ಪುತ್ರ ರೇವಣಸಿದ್ದನು ತನ್ನ ತಂದೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಹುಲಸೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.