×
Ad

ಬೀದರ್: ಶಾಲಾ ಆವರಣದ ತೆರೆದ ಗುಂಡಿಗೆ ಬಿದ್ದು ವಿದ್ಯಾರ್ಥಿ ಮೃತ್ಯು

Update: 2024-09-08 12:32 IST

ಬೀದರ್: ಸರಕಾರಿ ಶಾಲೆಯ ಆವರಣದಲ್ಲಿ ನೂತನ ಕಟ್ಟಡಕ್ಕಾಗಿ ತೆಗೆದಿರುವ ಗುಂಡಿಯಲ್ಲಿ ಶೇಖರಣೆಗೊಂಡಿರುವ ನೀರಿಗೆ ಬಿದ್ದು ಐದನೇ ತರಗತಿಯ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಔರಾದ್ ಪಟ್ಟಣದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ನಡೆದಿದೆ.

ಔರಾದ್ ನಿವಾಸಿ ಜಿಶಾನ್ ಇಸ್ಮಾಯೀಲ್(11) ಮೃತಪಟ್ಟ ಬಾಲಕ.

ಶನಿವಾರ ಶಾಲೆಗೆ ರಜೆಯಿದ್ದ ಕಾರಣ ಬಾಲಕರು ಶಾಲೆಯ ಆವರಣದಲ್ಲಿ ಆಟವಾಡಲು ತೆರಳಿದ್ದರು. ಈ ವೇಳೆ ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ ತೆರೆದಿರುವ ಗುಂಡಿಯಲ್ಲಿ ಶೇಖರಣೆಗೊಂಡಿದ್ದ ನೀರಿಗೆ ಬಿದ್ದ ಜಿಶಾನ್ ಇಸ್ಮಾಯೀಲ್ ಮುಳುಗಿ ಮೃತಪಟ್ಟಿದ್ದಾನೆ ಮೂಲಗಳಿಂದ ತಿಳಿದು ಬಂದಿದೆ.

ಈ ಬಗ್ಗೆ ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News