ಬೀದರ್ | ಅಸಮಾನತೆ ವಿರುದ್ಧ ನಡೆದ ಯುದ್ಧವೇ ಭೀಮಾ ಕೋರೆಗಾಂವ್ ಯುದ್ಧ : ಮಹೇಶ್ ಗೋರನಾಳಕರ್
ಬೀದರ್ : ಅಸಮಾನತೆ ವಿರುದ್ಧ ನಡೆದ ಯುದ್ಧವೇ ಭೀಮಾ ಕೋರೆಗಾಂವ್ ಯುದ್ಧವಾಗಿದೆ ಎಂದು ʼಮನೆ ಮನೆಗೆ ಅಂಬೇಡ್ಕರ್ ಅಭಿಯಾನʼದ ಸಂಚಾಲಕ ಮಹೇಶ್ ಗೋರನಾಳಕರ್ ಅವರು ತಿಳಿಸಿದರು.
ಗುರುವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಮನೆ ಮನೆಗೆ ಅಂಬೇಡ್ಕರ್ ಅನುಷ್ಠಾನ ಸಮಿತಿ ಹಾಗೂ ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ವತಿಯಿಂದ ಜರುಗಿದ 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜ.1ರ, 1818ರಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ನಡೆದ ಭೀಮಾ ಕೋರೆಗಾಂವ್ ಯುದ್ಧವು ಅಸಮಾನತೆಯ ವಿರುದ್ದ ನಡೆದ ಸ್ವಾಭಿಮಾನದ ಯುದ್ಧವಾಗಿದೆ. ಆ ಯುದ್ಧದಲ್ಲಿ 500 ಜನರ ದಲಿತರು 28 ಸಾವಿರ ಮೇಲ್ಜಾತಿಯ ಪೆಶ್ವೆಗಳನ್ನು ಸೋಲಿಸಿದ್ದರು. ಇಂತಹ ಸ್ವಾಭಿಮಾನದ ಐತಿಹಾಸಿಕ ಯುದ್ಧವನ್ನು ಮುಚ್ಚಿಡಲಾಗಿತ್ತು. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ದೇಶ ಮತ್ತು ವಿಶ್ವಕ್ಕೆ ಈ ಯುದ್ಧದ ಬಗ್ಗೆ ಪರಿಚಯಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಉಷಾಬಾಯಿ ಬನಸೂಡೆ ಮತ್ತು ಜ್ಞಾನೋದಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ದಶರಥ್ ಗುರು ಅವರು ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ನಂದಮ್ಮಾ ಕುಂದೆ, ಸೊನಮ್ಮಾ ಕಸ್ತೂರೆ, ಶೆಶಿಕಲಾ ಕಾಂಬಳೆ, ಇಂದುಮತಿ ಸಾಗರ್, ನಿವೃತ್ತ ಪೋಲಿಸ್ ಅಧಿಕಾರಿ ಬಸವರಾಜ್ ಮೆತ್ರೆ, ಸಿದ್ರಾಮಪ್ಪಾ, ಅಂಬಾದಾಸ್ ಗಾಯಕವಾಡ್, ಮುಖೇಶ್ ರಾಯ್, ಪ್ರಮುಖರಾದ ಚಂದ್ರಕಾಂತ್ ನಿರಾಟೆ, ಅರುಣ ಪಟೇಲ್, ಜಗನಾಥ್ ಗಾಯಕವಾಡ್, ಗೋಪಾಲ್ ದೊಡ್ಡಿ, ಹರ್ಷಿತ್ ದಾಂಡೆಕರ್, ಜೈ ಭೀಮ್ ಮಿಠಾರೆ, ಸುಬ್ಬಣ್ಣ ಕರಕನಳ್ಳಿ, ಶರಣು ಫುಲೆ, ನವನಾಥ್ ವಂಟೆ, ಪ್ರಶಾಂತ್ ಭಾವಿಕಟ್ಟಿ, ರಾಜಶೇಖರ್ ಹಲಮಡಗೆ, ಶಿವರಾಜ್ ಅಮಲಾಪೂರ್, ನಾಗೇಶ್ ಸಾಗರ್, ಧನರಾಜ್, ಸತೀಶ್ ದಿನೆ, ಎಂ.ಡಿ ಅನ್ವರಶಾ, ಮುಹಮ್ಮದ್ ಖಾಲಿದ್, ಜಗನಾಥ್ ಮಹೇಂದ್ರ ನಗರ ಹಾಗೂ ಮಾರುತಿ ಚಿಟ್ಟಾ ಅಮಿತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.