×
Ad

ಬೀದರ್ ನ ಪಾಲಿಕ್ಲಿನಿಕ್ ಗೆ ರಾಜ್ಯಮಟ್ಟದ ಅತ್ಯುತ್ತಮ ಪಶು ವೈದ್ಯಕೀಯ ಸೇವಾ ಪ್ರಶಸ್ತಿ

Update: 2025-12-29 20:23 IST

ಬೀದರ್ : ಪಾಲಿಕ್ಲಿನಿಕ್ ಬೀದರ್ ಗೆ ರಾಜ್ಯಮಟ್ಟದ ಅತ್ಯುತ್ತಮ ಪಶು ವೈದ್ಯಕೀಯ ಸೇವಾ ಪ್ರಶಸ್ತಿ ಲಭಿಸಿದೆ.

ಬೆಂಗಳೂರಿನ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಯುಕ್ತಾಲಯದಿಂದ ಆಯೋಜಿಸಲಾಗಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಅತ್ಯುತ್ತಮ ಪಾಲಿಕ್ಲಿನಿಕ್ ಸ್ಪರ್ಧೆಯಲ್ಲಿ ಬೀದರ್‌ ಜಿಲ್ಲೆಯ ಪಶು ಇಲಾಖೆಯ ಪಶುವೈದ್ಯಕೀಯ ಪಾಲಿಕ್ಲಿನಿಕ್ (ಜಿಲ್ಲಾ ಪಶು ಆಸ್ಪತ್ರೆ)ಗೆ 'ಮೂರನೇ' ಅತ್ಯುತ್ತಮ ಪಾಲಿಕ್ಲಿನಿಕ್ ಪ್ರಶಸ್ತಿಯಂದು ಘೋಷಿಸಲಾಗಿದ್ದು, ಬೆಂಗಳೂರಿನಲ್ಲಿ ಬೀದರ್ ನ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ರವಿಂದ್ರಕುಮಾರ್ ಭೂರೆ ಅವರಿಗೆ ಪ್ರಶಸ್ತಿ ಮತ್ತು ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗಿದೆ.

ರಾಜ್ಯಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆಯ ಮೂಲಕ ನೀಡಲಾದ ಈ ಪ್ರಶಸ್ತಿಯು ಬೀದರ್ ನ ಪಾಲಿಕ್ಲಿನಿಕ್ ಮೂಲಸೌಕರ್ಯಗಳು, ಸ್ವಚ್ಛತೆ , ಆಧುನಿಕ ಸೌಲಭ್ಯಗಳು ಹಾಗೂ ವಿವಿಧ ರೋಗಗ್ರಸ್ತ ಪ್ರಾಣಿಗಳ ಗುಣಮಟ್ಟದ ಚಿಕಿತ್ಸೆ, ಶಸ್ತ್ರಚಿಕಿತ್ಸೆಯನ್ನು ನೀಡುವ ಜೊತೆಗೆ ಸಾರ್ವಜನಿಕರಿಗೆ ನಿರಂತರ ಪಶುವೈದ್ಯಕೀಯ ಸೇವೆಯನ್ನು ಗುರುತಿಸಿ ಈ ಗೌರವವನ್ನು ನೀಡಲಾಗಿದೆ.

ಈ ಪ್ರಶಸ್ತಿಗೆ ಬೀದರ್ ನ ಪಾಲಿಕ್ಲಿನಿಕ್ ಮುಖ್ಯ ಪಶುವೈದ್ಯರಾದ ಡಾ.ಗೌತಮ್ ಅರಳಿ, ಡಾ.ನೀಲಕಂಠ್ ಚನ್ನಶೆಟ್ಟಿ ಹಾಗೂ ಡಾ.ಶ್ರೀಕಾಂತ್ ಬಿರಾದಾರ್ ಸೇರಿದಂತೆ ಸಿಬ್ಬಂದಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News