ಕಾಮನ್‍ವೆಲ್ತ್ ಸಂಸದೀಯ ಸಂಘ ಭಾರತ ವಿಭಾಗದ 11ನೆ ಸಮ್ಮೇಳನದಲ್ಲಿ ಬಿದ್ರಿ ಕಲೆಯ ವಸ್ತು ಪ್ರದರ್ಶನ
Update: 2025-09-14 12:42 IST
ಬೀದರ್ : ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ 11ನೇ ಸಿಪಿಎ (ಕಾಮನ್‍ವೆಲ್ತ್ ಸಂಸದೀಯ ಸಂಘ) ಭಾರತ ವಿಭಾಗದ ಸಮ್ಮೇಳನದ ಕೂಟದಲ್ಲಿ ಐತಿಹಾಸಿಕ ಬಿದ್ರಿ ಕಲೆಯ ವಸ್ತುಗಳನ್ನು ಶನಿವಾರ ಪ್ರದರ್ಶನ ಮಾಡಲಾಯಿತು.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಹಾಗೂ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬಿದ್ರಿ ಕಲೆಯ ಈ ಐತಿಹಾಸಿಕ ವಸ್ತುಗಳ ಮಹತ್ವದ ಬಗ್ಗೆ ಕಲೆಗಾರರ ಹತ್ತಿರ ಕೇಳಿ ತಿಳಿದುಕೊಂಡರು.
ಬಿದ್ರಿ ಕಲೆಗಾರ ಸತೀಶ್ ದಯಾಕರ್ ಅವರು ಬಿದ್ರಿ ವಸ್ತುಗಳ ಮಹತ್ವ, ಅದರ ಇತಿಹಾಸ ಹಾಗೂ ಆ ವಸ್ತುಗಳು ಹೇಗೆ ತಯಾರಿಸುತ್ತಾರೆ, ಅದರ ತಂತ್ರ ಮತ್ತು ಅದರ ಸಂಶೋಧನೆಯ ಅಗತ್ಯತೆಗಳ ಕುರಿತು ವಿವರಿಸಿದರು.