ಗ್ರಾಮ ಪಂಚಾಯತ್ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ; ಮದ್ಯ ಮಾರಾಟ ನಿಷೇಧಿಸಿ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಆದೇಶ
ಶಿಲ್ಪಾ ಶರ್ಮಾ
ಬೀದರ್ : ಜಿಲ್ಲೆಯ ಹಲವು ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಮೇ 25 ರಂದು ಉಪ ಚುನಾವಣೆ ನಡೆಯಲಿದ್ದು, ಮತದಾನದ ವೇಳೆ ಅಹಿತಕರ ಘಟನೆಗಳು ಜರುಗದಂತೆ ಅಗತ್ಯ ಕ್ರಮವಾಗಿ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಆದೇಶ ಹೊರಡಿಸಿದ್ದಾರೆ.
ಉಪಚುನಾವಣೆಯು ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವ ಉದ್ದೇಶದಿಂದ ಚುನಾವಣೆ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿರುವುದರಿಂದ ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತಿಗಳ ಸಂಪೂರ್ಣ ವ್ಯಾಪ್ತಿಯಲ್ಲಿ ಮೇ 23 ಸಾಯಂಕಾಲ 5 ಗಂಟೆಯಿಂದ ಮೇ 25 ರ ಮಧ್ಯರಾತ್ರಿ 12 ಗಂಟೆ ವರೆಗೆ ಎಲ್ಲ ವಿಧದ ಅಬಕಾರಿ ಸನ್ನದುಗಳು ಮುಚ್ಚಬೇಕು. ಹಾಗೆಯೇ ಮದ್ಯ ಮಾರಾಟ ಮತ್ತು ಸಾಗಾಣಿಕೆ ಮಾಡುವುದನ್ನು ನಿಷೇಧಿಸಬೇಕು ಎಂದು ಅವರು ಆದೇಶಿಸಿದ್ದಾರೆ.
ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತಿಗಳ ವಿವರ :
ಬೀದರ್ ತಾಲ್ಲೂಕಿನ ಮರಕುಂದಾ ಗ್ರಾಮ ಪಂಚಾಯತ್ (01), ನಾಗೋರಾ ಗ್ರಾಮ ಪಂಚಾಯತ್ (01), ಬಗದಲ್ ಗ್ರಾಮ ಪಂಚಾಯತ್ (01), ಅಲಿಯಾಬಾದ.ಜೆ ಗ್ರಾಮ ಪಂಚಾಯತ್ (01), ಬಸವಕಲ್ಯಾಣ ತಾಲ್ಲೂಕಿನ ಹಾರಕೂಡ ಗ್ರಾಮ ಪಂಚಾಯತ್ (01), ಭಾಲ್ಕಿ ತಾಲ್ಲೂಕಿನ ಮೇಹಕರ್ ಗ್ರಾಮ ಪಂಚಾಯತ್ (01), ಕುರುಬಖೇಳಗಿ ಗ್ರಾಮ ಪಂಚಾಯತ್ (01), ಔರಾದ್ ತಾಲ್ಲೂಕಿನ ಹೆಡಗಾಪೂರ್ ಗ್ರಾಮ ಪಂಚಾಯತ್ (01), ಏಕಂಬಾ ಗ್ರಾಮ ಪಂಚಾಯತ್ (04) ಹಾಗೂ ಹುಮನಾಬಾದ್ ತಾಲ್ಲೂಕಿನ ಮದರಗಾಂವ್ ಗ್ರಾಮ ಪಂಚಾಯತ್ (01), ನಂದಗಾಂವ್ ಗ್ರಾಮ ಪಂಚಾಯತ್ (07) ಸೇರಿ ಜಿಲ್ಲೆಯ ಒಟ್ಟು 11 ಗ್ರಾಮ ಪಂಚಾಯತ್ ಗಳ 20 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.