×
Ad

ಬೀದರ್‌ನಲ್ಲಿ ನಿರಂತರ ಮಳೆ | ನಿಂತ ಕಾರಿನ ಮೇಲೆ ಬಿದ್ದ ಬೃಹತ್ ಗಾತ್ರದ ಮರ

Update: 2025-08-19 19:42 IST

ಬೀದರ್ : ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಬಸವಕಲ್ಯಾಣದಲ್ಲಿ ಬೃಹತ್ ಗಾತ್ರದ ಮರವೊಂದು ನಿಂತ ಕಾರಿನ ಮೇಲೆ ಉರುಳಿದ ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದೆ.

ಬಸವಕಲ್ಯಾಣ ನಗರದ ಪರ್ತಾಪುರ್ ರಸ್ತೆಯ ಡೈಮಂಡ್ ಕಾಲೇಜಿನ ಹತ್ತಿರ ಬೃಹತ್ ಗಾತ್ರದ ಹುಣಸೆ ಮರವು ಮಳೆಯಿಂದಾಗಿ ಕಾರಿನ ಮೇಲೆ ಬಿದ್ದಿದ್ದು, ಕಾರಿನ ಮುಂಭಾಗ ಜಖಂಗೊಂಡಿದ್ದು, ಬೃಹತ್ ಅನಾಹುತವೊಂದು ತಪ್ಪಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಸ್ಥಳೀಯರು ರಾತ್ರಿ 3 ಗಂಟೆಯಿಂದಲೇ ವಿದ್ಯುತ್ ವ್ಯತ್ಯಯಕ್ಕೆ ಒಳಗಾಗಿ ತೊಂದರೆ ಅನುಭವಿಸಿದ್ದರು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ವಿದ್ಯುತ್ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಇಂದು ಭೇಟಿ ನೀಡಿ ಮರ ತೆರವುಗೊಳಿಸಿದ್ದಾರೆ. ಹಾನಿಗೊಳಗಾದ ಕಂಬ ಹಾಗೂ ಲೈನ್  ಅನ್ನು ಸರಿಪಡಿಸಲು ಇನ್ನೂ ಕೆಲ ಗಂಟೆಗಳ ಸಮಯ ಬೇಕಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯರು ಶೀಘ್ರ ವಿದ್ಯುತ್ ಸರಬರಾಜು ಪುನರಾರಂಭವಾಗುವ ನಿರೀಕ್ಷೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News