ಸಂವಿಧಾನ ಕುರಿತು ವಿವಾದಾತ್ಮಕ ಭಾಷಣ | ದತ್ತಾತ್ರೇಯ ಹೊಸಬಾಳೆ ವಿರುದ್ಧ ಕ್ರಮ ಜರುಗಿಸಲಿ : ಘಾಳೆಪ್ಪಾ ಲಾಧೇಕರ್
ಬೀದರ್ : ಸಂವಿಧಾನ ಕುರಿತು ವಿವಾದಾತ್ಮಕ ಭಾಷಣ ಮಾಡಿದ ದತ್ತಾತ್ರೇಯ ಹೊಸಬಾಳೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಭೀಮ್ ಆರ್ಮಿ ಜಿಲ್ಲಾ ಗೌರವ ಅಧ್ಯಕ್ಷ ಘಾಳೆಪ್ಪಾ ಲಾಧೇಕರ್ ಅವರು ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
ಜಾತ್ಯಾತೀತತೆ ಎಂದರೆ ಜಾತಿ ಮತ್ತು ಧರ್ಮ ನೋಡದೇ ಎಲ್ಲರನ್ನೂ ಸಮಾನವಾಗಿ ಕಾಣುವುದಾಗಿದೆ. ಸಮಾಜವಾದ ಎಂದರೆ ಸಾಮಾಜಿಕ ಮತ್ತು ಆರ್ಥಿಕವಾಗಿ ಎಲ್ಲರಿಗೂ ನ್ಯಾಯ ಒದಗಿಸುವುದು ಎಂದರ್ಥವಾಗಿದೆ. ಆದರೆ ಸಂವಿಧಾನದಲ್ಲಿನ ಇಂತಹ ಮಹತ್ವದ ಅಂಶಗಳು ತೆಗೆದುಹಾಕಬೇಕು ಎಂದು ಆರೆಸ್ಸೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಸಂವಿಧಾನ ವಿರೋಧಿಯಾಗಿ ಮಾತನಾಡುತ್ತಿರುವುದು ದೇಶದ್ರೋಹದ ನಡವಳಿಕೆಯಾಗಿದೆ ಎಂದು ಕಿಡಿ ಕಾರಿದ್ದಾರೆ.
ಆರೆಸ್ಸೆಸ್ ನವರಾದ ಹೊಸಬಾಳೆ , ಬಾಬಾ ಸಾಹೇಬರ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಮಾತನಾಡಿದ್ದಾರೆ. ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು. ಹಾಗೆಯೇ ಅವರನ್ನು ಆರೆಸ್ಸೆಸ್ ನಿಂದ ಹೊರಹಾಕಿ ಅವರ ಮೇಲೆ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.