×
Ad

ಹುಮನಾಬಾದ್ | ರಾಶಿ ಯಂತ್ರ ಆಟೋಗೆ ಢಿಕ್ಕಿ ಪ್ರಕರಣ : ಚಿಕಿತ್ಸೆ ಫಲಕಾರಿಯಾಗದೆ ಆಟೋ ಚಾಲಕ ಮೃತ್ಯು

Update: 2026-01-03 19:18 IST

ಖಾಲಿದ್ ಪಾಷಾ

ಹುಮನಾಬಾದ್ : ತಾಲೂಕಿನ ಚಿಟಗುಪ್ಪಾ ಪಟ್ಟಣದಲ್ಲಿ ಗುರುವಾರ ರಾಶಿ ಮಾಡುವ ಯಂತ್ರದ ಬ್ರೇಕ್ ವಿಫಲವಾದ ಪರಿಣಾಮ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರನ್ನು ಚಿಟಗುಪ್ಪ ತಾಲೂಕು ನಿರ್ಣಾ ಗ್ರಾಮದ ನಿವಾಸಿ ಖಾಲಿದ್ ಪಾಷಾ (40) ಎಂದು ಗುರುತಿಸಲಾಗಿದೆ.

ರಾಶಿ ಮಾಡುವ ಯಂತ್ರದ ಬ್ರೇಕ್ ವಿಫಲವಾದಾಗ ಸಂಭವಿಸಬಹುದಾದ ಭಾರಿ ಅನಾಹುತ ತಪ್ಪಿಸಲು, ಯಂತ್ರ ಚಾಲಕ ವಾಹನವನ್ನು ರಸ್ತೆಯ ಡಿವೈಡರ್‌ಗೆ ಗುದ್ದಿದ್ದಾನೆ. ಈ ವೇಳೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಆಟೋವೊಂದಕ್ಕೆ ಯಂತ್ರ ಢಿಕ್ಕಿ ಹೊಡೆದ ಪರಿಣಾಮ ಆಟೋ ಸಂಪೂರ್ಣವಾಗಿ ನುಚ್ಚುನೂರಾಗಿದ್ದು, ಅಪಘಾತದಲ್ಲಿ ಆಟೋ ಚಾಲಕ ಖಾಲಿದ್ ಪಾಷಾ ಗಂಭೀರವಾಗಿ ಗಾಯಗೊಂಡಿದ್ದರು.

ಗಾಯಗೊಂಡ ಖಾಲಿದ್ ಪಾಷಾ ಅವರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತ ಖಾಲಿದ್ ಪಾಷಾ ಅವರು ಬಡ ಕುಟುಂಬದ ಆರ್ಥಿಕ ಆಧಾರಸ್ತಂಭವಾಗಿದ್ದರು. ಅವರಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳು ಇದ್ದು, ಕುಟುಂಬದ ಯಜಮಾನನನ್ನು ಕಳೆದುಕೊಂಡ ಪರಿಣಾಮ ಕುಟುಂಬ ಸಂಕಷ್ಟಕ್ಕೆ ಒಳಗಾಗಿದೆ. ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕುಟುಂಬಕ್ಕೆ ಭೇಟಿ ನೀಡಿ ಅಗತ್ಯ ನೆರವು ಒದಗಿಸಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.







Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News