ಹುಮನಾಬಾದ್‌: ಪಟ್ಟಣದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ವಾಲ್ಮೀಕಿ ಸಮುದಾಯ ಭವನಕ್ಕೆ ಶಾಸಕ ಸಿದ್ದು ಪಾಟೀಲ್ ಅವರು ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿದರು.

ಹಳ್ಳಿಖೇಡ (ಕೆ) ವಾಡಿ ಆಶ್ರಮದ ದತ್ತಾತ್ರೇಯ ಮಹಾರಾಜ್, ರಾಮನಗರ ಅಂಬಿಗರ ಚೌಡಯ್ಯ ಆಶ್ರಮದ ರಾಜಶೇಖರ್ ತುಮಕುಂಟೆ ಹಾಗೂ ಬಸವಕಲ್ಯಾಣ ಅಂಬಿಗರ ಚೌಡಯ್ಯ ಆಶ್ರಮದ ರತಿಕಾಂತ್ ಗುರುಗಳ ಸಾನಿಧ್ಯದಲ್ಲಿ ಭೂಮಿಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅನಿಲ್ ಪಲ್ಲೇರಿ, ರಾಜಣ್ಣ ಪೋಲದಾಸ್, ನಾಗಭೂಷಣ್ ಸಂಗಮ್, ಅರುಣ್ ಭಾವುಗೆ, ಈಶ್ವರ್ ಮಾಸ್ಟರ್, ಬಲವಂತ್ ಪೋಲದಾಸ್, ಸಂತೋಷ್ ಸಂಗಮ್, ನರಸಪ್ಪ ನರನಾಳ್, ಅಮಿತ್ ಚಿಂಚೋಳಿಕರ್, ಅಶೋಕ್ ಹಣಕುಣಿ, ರೇಖಾ ಹೊಸಮನಿ, ಬಾಬುರಾವ್ ಓಳಕಿಂಡಿ, ವಿನೋದ್ ಪೋಲದಾಸ್, ಅವಿನಾಶ್ ಪೋಲದಾಸ್, ವೆಂಕಟ್ ಪಾಟೀಲ್, ಜಗದೀಶ್ ವಾಂಜರಿ, ಆನಂದ್ ತಾಳಮಡಗಿ, ಈಶ್ವರ್ ನೇಲಗಿ ಹಾಗೂ ಚಂದ್ರಕಾಂತ್ ರಾಂಪೂರ್ ಸೇರಿದಂತೆ ಸಮಾಜದ ಅನೇಕ ಯುವಕರು ಹಾಗೂ ಮುಖಂಡರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor