ಹುಮನಾಬಾದ್‌: ಪಟ್ಟಣದ ವಾಂಜರಿ ಬಡಾವಣೆಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಎನ್‌ಎಸ್‌ಯುಐ ಘಟಕದ ಪ್ರಧಾನ ಕಾರ್ಯದರ್ಶಿ ಯೇಸುದಾಸ್ ಕಟ್ಟಿಮನಿ ಅವರ ನೇತೃತ್ವದಲ್ಲಿ ಮಂಗಳವಾರ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಯಿತು.

ಮಾಜಿ ಸಚಿವರ ಗೃಹ ಕಚೇರಿಯಲ್ಲಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಯೇಸುದಾಸ್ ಕಟ್ಟಿಮನಿ, ವಾಂಜರಿ ಬಡಾವಣೆಯ ಅಗ್ನಿಶಾಮಕ ಕಚೇರಿ ಸಮೀಪದ ವ್ಯಾಪ್ತಿಯಲ್ಲಿ ರಸ್ತೆ ಹದಗೆಟ್ಟಿರುವುದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಅಗ್ನಿಶಾಮಕ ಕ್ರಾಸ್‌ನಿಂದ ಅದೇ ಓಣಿಯ ನಿವಾಸಿ ನಾಗರಾಜ್ ಅವರ ಮನೆವರೆಗೆ ಸಿಸಿ ರಸ್ತೆ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಉಮೇಶ್ ಆಕಾರ, ಅರ್ಜುನ್ ಆಕಾರ, ಆಕಾಶ್ ವಜನದಾರ್, ಮಹೇಶ್ ಕಟ್ಟಿಮನಿ, ವಿಕಾಶ್ ಕೌಳಸಕರ್, ಅಭಿಷೇಕ್ ರತ್ನಡಗಿ, ಅಂಕುಶ್ ವಜನದಾರ್, ಆನಂದರೆಡ್ಡಿ, ಅರುಣ್ ಚಟ್ನಳ್ಳಿಕರ್, ಅಮನ್ ಕಿಣ್ಣಿಕರ್ ಹಾಗೂ ಜಡ್ಸನ್ ಕಟ್ಟಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor