ಛಾಯಾಗ್ರಾಹಕರ ಅಭಿವೃದ್ಧಿಗೆ ಸದಾ ನನ್ನ ಸಹಕಾರವಿದೆ : ಶಾಸಕ ಪ್ರಭು ಚೌವ್ಹಾಣ್
ಔರಾದ್ : ಕಾರ್ಯಕ್ರಮ ಹಾಗೂ ನಮ್ಮ ಜೀವನದ ಸವಿ ನೆನಪುಗಳನ್ನು ಶಾಶ್ವತವಾಗಿ ಇರಿಸಲು ಪ್ರಮುಖ ಪಾತ್ರ ವಹಿಸುವ ಛಾಯಾಗ್ರಾಹಕರ ಅಭಿವೃದ್ಧಿಗೆ ನನ್ನ ಸಹಕಾರ ಸದಾ ಇರುತ್ತದೆ ಎಂದು ಶಾಸಕ ಪ್ರಭು ಚೌವ್ಹಾಣ್ ಅವರು ತಿಳಿಸಿದರು.
ಇಂದು ಔರಾದ್ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ, ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘ, ಫೋಟೊಗ್ರಾಫರ್ ಅಸೋಸಿಯೇಷನ್ ಔರಾದ್ ಇವರ ವತಿಯಿಂದ ಏರ್ಪಡಿಸಿದ್ದ 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಛಾಯಾಚಿತ್ರ ಸಾವಿರ ಪದಗಳನ್ನು ಹೇಳುತ್ತದೆ. ಜೀವನದ ಪ್ರತಿ ಶುಭ ಸಂದರ್ಭದಲ್ಲಿಯೂ ಛಾಯಾಗ್ರಾಹಕರ ಅವಶ್ಯಕತೆಯಿದೆ ಎನ್ನುವಷ್ಟು ಛಾಯಾಗ್ರಹಣದ ಮಹತ್ವ ಹೆಚ್ಚಾಗಿದೆ. ಹಿಂದೆ ನಡೆದ ಶುಭ ಸಂದರ್ಭಗಳನ್ನು ಛಾಯಾಚಿತ್ರದ ಮೂಲಕ ನೋಡಬಹುದು. ಸಮಾಜದಲ್ಲಿ ಛಾಯಾಗ್ರಾಹಕರ ಪಾತ್ರ ಹೆಚ್ಚಿನ ಪ್ರಮಾಣದಲ್ಲಿದೆ. ತಾವು ಶಿಸ್ತು, ಸಂಯಮದಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಹೇಶ್ ಪಾಟೀಲ್, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ, ಕಾರ್ಮಿಕ ಇಲಾಖೆಯ ಅಧಿಕಾರಿ ಶ್ರೀಧರ್ ಪುರಮಾವರ್, ಸಂಘದ ಜಿಲ್ಲಾಧ್ಯಕ್ಷ ಪವನಸಿಂಗ್ ಠಾಕೂರ್, ಸಂಘದ ಪ್ರಮುಖರಾದ ನಿಸಾರ್ ಅಹ್ಮದ್, ಮಂಜುನಾಥ್ ಮೇತ್ರೆ, ಇಮ್ರಾನ್, ಶಿವಕುಮಾರ್ ಬಿರಾದಾರ್, ದೇವರಾಜ್ ಕೋಳೆಕರ್, ಸತೀಷ ಚಾಂಡೇಶ್ವರೆ, ಚಂದ್ರಕಾಂತ್ ಚಂದಾ ಕೊಳ್ಳೂರ್, ಧನರಾಜ್ ಗೊಂಡ, ರಾಜಕುಮಾರ್ ಬಿರಾದಾರ್, ಬಾಲಾಜಿ ಕೊಳೆಕರ್, ಮಲ್ಲಿಕಾರ್ಜುನ್ ದಾನಾ, ಜಿತೇಂದ್ರ ಸೋನಾಳ್, ಶ್ರೀಕಾಂತ್ ಹೊಂಡೆಕರ್ ಹಾಗೂ ಶ್ರೀಕಾಂತ್ ಜೋಶಿ ಸೇರಿದಂತೆ ಇತರರು ಉಪಸ್ಥಿತರಿದ್ದರು.