ಪತ್ರಕರ್ತರಿಂದ ಸಮಾಜ ಬದಲಾವಣೆಯಾಗಬಹುದು: ಶಾಸಕ ಡಾ. ಸಿದ್ದು ಪಾಟೀಲ್

Update: 2026-07-31 18:44 IST

ಹುಮನಾಬಾದ್: ಪತ್ರಕರ್ತರ ಲೇಖನದಿಂದ ಸಮಾಜದ ಬದಲಾವಣೆಯಾಗಬಹುದು ಎಂದು ಶಾಸಕ ಸಿದ್ಧು ಪಾಟೀಲ್‌ ಅವರು ಹೇಳಿದರು.

ಪಟ್ಟಣದ ಹೊರವಲಯದಲ್ಲಿ ಭಾರತೀಯ ಜನತಾ ಪಕ್ಷದ ಮಂಡಳದ ವತಿಯಿಂದ ಗುರುವಾರ ಸಾಯಂಕಾಲ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಅವರು ಮಾತನಾಡಿದರು.

ನಾನು ರಾಜಕೀಯಕ್ಕೆ ಬರುವ ಮುಂಚೆ ಪತ್ರಿಕೆಯ ಮಹತ್ವ ನನಗೆ ಅಷ್ಟೋಂದು ಗೊತ್ತಿರಲಿಲ್ಲ. ಆದರೆ, ರಾಜಕೀಯಕ್ಕೆ ಬಂದು ಶಾಸಕನಾದ ಮೇಲೆ ಪತ್ರಿಕೆಯ ಮಹತ್ವ ಗೊತ್ತಾಗುತ್ತಿದೆ ಎಂದರು.

ಸುಮಾರು ವರ್ಷಗಳಿಂದ ಹುಮನಾಬಾದ್ ಹಾಗೂ ಚಿಟಗುಪ್ಪಾ ನಗರದಲ್ಲಿ ಪತ್ರಿಕಾ ಭವನ ಬೇಕು ಎನ್ನುವ ಬೇಡಿಕೆ ಕೇಳುತ್ತಲೆ ಬಂದಿದ್ದೇವೆ. ಆದರೆ, ಇದೀಗ ಈ ಬೇಡಿಕೆ ಈಡೇರುವ ಸಮಯ ಬಂದಿದೆ. ಅದಕ್ಕೆ ಬೇಕಾಗುವ ಜಾಗವು ನೋಡೋಣ. ಹಾಗೆಯೇ ಅದಕ್ಕಾಗಿ ಅನುದಾನ ತಂದು ಬೇಗ ಪತ್ರಿಕಾ ಭವನ ಕಟ್ಟಡ ನಿರ್ಮಾಣವಾಗುವಂತೆ ಮಾಡುತ್ತೇನೆ. ಮುಂದಿನ ವರ್ಷ ಪತ್ರಿಕಾ ಭವನದಲ್ಲೇ ಪತ್ರಿಕಾ ದಿನಾಚರಣೆ ಆಚರಿಸೋಣ ಎಂದು ಅವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಳದ ಅಧ್ಯಕ್ಷ ಅನಿಲ್ ಪಸಾರ್ಗಿ, ಮುಖಾಂಡಾರದ ಬಸವರಾಜ್ ಆರ್ಯ, ಗಜೇಂದ್ರ ಕನಕಟ್ಕರ್, ರವಿ ಹೊಸಳ್ಳಿ, ವಿನಾಯಕ್ ಮಣಕೊಜಿ, ಪತ್ರಕರ್ತರ ಸಂಘದ ಅಧ್ಯಕ್ಷ ಸಂಜುಕುಮಾರ್ ಜುನ್ನಾ, ಕಾರ್ಯದರ್ಶಿ ಗುಂಡು ಅತಿವಾಳ್, ಪತ್ರಕರ್ತರಾದ ಶೈಲೆಂದ್ರ ಕೌಡಿ, ಪ್ರಶಾಂತ್ ಹೊಸಮನಿ, ದಿಲೀಪಕುಮಾರ್ ಮೇತ್ರೆ, ಮಲ್ಲಿಕಾರ್ಜುನ್ ನಿಂಬುರೆ,‌ ಶಿವಶರಣ ಚಾಂಗ್ಲೆರಾ ಹಗೂ ರಾಮಶೆಟ್ಟಿ ಮರಖಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News