ಬೀದರ್ | ಕರ್ನಾಟಕ ಬೆಳೆ ಸಮೀಕ್ಷೆದಾರರಿಗೆ ವಿಶೇಷ ಸೌಲಭ್ಯ ನೀಡಬೇಕು : ಮಲ್ಲಿಕಾರ್ಜುನ ಸ್ವಾಮಿ
ಬೀದರ್ : ಬೆಳೆ ಸಮೀಕ್ಷೆದಾರರು ಮಳೆ, ಗಾಳಿ ಎನ್ನದೆ ಸಾಕಷ್ಟು ಕಷ್ಟಗಳ ಮಧ್ಯೆ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಇವರ ಕಡೆಗೆ ಗಮನ ಹರಿಸಿ ಅವರಿಗೆ ವಿಶೇಷ ಸೌಲಭ್ಯ ನೀಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಸ್ವಾಮಿ ಹೇಳಿದರು.
ಜು.22ರಂದು ನರಗದ ಖಾಸಗಿ ಹೋಟೆಲ್ ಒಂದರಲ್ಲಿ ನಡೆದ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘದ ಬೀದರ್ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರು ಕೂಡ ಬೆಳೆ ಸಮೀಕ್ಷೆದಾರರು ತಮ್ಮ ಜಮೀನಿಗೆ ಬೆಳೆ ಸಮೀಕ್ಷೆ ನಡೆಸಲು ಬಂದಾಗ ಅವರಿಗೆ ಸಹಕಾರ ನೀಡಬೇಕು. ಬೆಳೆ ಖರೀದಿ ಮಾಡುವಾಗ ಟೆಕ್ನಿಕಲ್ ಕಾರಣದಿಂದ ರೈತರಿಗೆ ಸಮಸ್ಯೆಯಾಗುತ್ತಿದೆ ಅದನ್ನು ಸರಿಪಡಿಸಬೇಕು ಎಂದು ಅವರು ಮನವಿ ಮಾಡಿದರು.
ಭಾಲ್ಕಿಯ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪಿ ಎಂ ಮಲ್ಲಿಕಾರ್ಜುನ್ ಮಾತನಾಡಿ, ಬೆಳೆ ಸಮೀಕ್ಷೆಯ ಉದ್ದೇಶ ಯಾವ ಬೆಳೆ ಎಷ್ಟು ಬೆಳೆಯುತ್ತೇವೆ ಎಂದು ತಿಳಿಯುವುದರ ಜೊತೆಗೆ ಆಹಾರ ಭದ್ರತೆ ತಿಳಿಯುವುದಾಗಿದೆ. ರೈತರು ಏನೇ ಸೌಲಭ್ಯ ಪಡೆಯಬೇಕು ಎಂದರೆ ಈ ಸಮೀಕ್ಷೆಯ ತುಂಬಾ ಅವಶ್ಯಕತೆ ಇದೆ ಎಂದು ತಿಳಿಸಿದರು.
ಕರ್ನಾಟಕ ಬೆಳೆ ಸಮೀಕ್ಷೆದಾರರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್ ಕಾಂಬಳೆ ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘದ ಸಂಸ್ಥಾಪಕ ರಾಜ್ಯ ಘಟಕ ಕಾರ್ಯದರ್ಶಿ ರಾಜು ಡಿಪರೇಂಟ್, ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘದ ಜಿಲ್ಲಾಧ್ಯಕ್ಷ ಮೊಹನ್ ಮಾನೆ ಗಾದಗಿ, ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘದ ಸಂಘಟನಾ ಕಾರ್ಯದರ್ಶಿ ಸುಂದರ್ ಹಲಗೆ, ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಶಾಂತಮ್ಮ ಮೂಲಗೆ, ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನಯ್ ಮಾಳಗೆ, ವೀರಶೆಟ್ಟಿ ಪಾಟೀಲ್, ನಾಗಶೆಟ್ಟಿ ನಂಜವಾಡೆ, ಏಕನಾಥ್ ಮೇತ್ರೆ, ಶಿವಕುಮಾರ್ ಶಿವಗೊಂಡ್, ಭೀಮಷಾ ಮೇಲಕೇರಿ, ವಿನೋದ್ ಉಡಬಾಳ್ ಹಾಗೂ ಚಂದ್ರಶೇಖರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.