×
Ad

ಬೀದರ್ | ಮನೆ ಮೇಲ್ಛಾವಣಿಯಿಂದ ತಳ್ಳಿ ಬಾಲಕಿಯನ್ನು ಕೊಂದ ಮಲತಾಯಿ : ಪ್ರಕರಣ ದಾಖಲು

Update: 2025-09-15 23:20 IST

ಬೀದರ್: ಮಲತಾಯಿಯೊಬ್ಬಳು ತನ್ನ ಮಗಳನ್ನು ಮನೆಯ ಮೇಲ್ಛಾವಣಿಯಿಂದ ತಳ್ಳಿ ಕೊಂದ ಘಟನೆ ನಗರದ ನ್ಯೂ ಆದರ್ಶ ಕಾಲೋನಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೃತ ಬಾಲಕಿಯನ್ನು ಶಾನವಿ (7) ಎಂದು ಗುರುತಿಸಲಾಗಿದೆ.

ಈ ಘಟನೆ ಕುರಿತು ಶಾನವಿಯ ಅಜ್ಜಿ ವಿಜಯಶ್ರೀ ಅವರು ನೀಡಿದ ದೂರಿನಲ್ಲಿ, ಆ. 27 ರಂದು ಮನೆ ಮೇಲ್ಛಾವಣಿಯಿಂದ ಮೊಮ್ಮಗಳು ಬಿದಿದ್ದು, ಆಸ್ಪತ್ರೆಗೆ ಸಾಗಿಸಿದರೂ ಮೃತಪಟ್ಟಿದ್ದಳು. ಮೊದಲು ನಾವು ಕಾಲು ಜಾರಿ ಬಿದ್ದಿರಬಹುದು ಎಂದುಕೊಂಡಿದ್ದೆವು. ಆದರೆ ಪಕ್ಕದ ಮನೆಯ ಸಿಸಿಟಿವಿ ದೃಶ್ಯದಲ್ಲಿ ನನ್ನ ಸೊಸೆ ರಾಧಾ ಆಕೆಯನ್ನು ಮೇಲ್ಛಾವಣಿಯಿಂದ ತಳ್ಳಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.

ಶಾನವಿ, ನನ್ನ ಮಗನ ಮೊದಲ ಹೆಂಡತಿ ಗಾಯತ್ರಿಯ ಮಗಳು. ನನ್ನ ಮಗ ಮತ್ತು ರಾಧಾಳದ್ದು ಎರಡನೇ ಮದುವೆ. ಇವರಿಬ್ಬರಿಗೆ ಜವಳಿ ಮಕ್ಕಳಿದ್ದಾರೆ. ಮುಂದಿನ ದಿನಗಳಲ್ಲಿ ಈ ಇಬ್ಬರು ಮಕ್ಕಳಿಗೆ ತೊಂದರೆ ಆಗಬಹುದು ಎಂದುಕೊಂಡು ರಾಧಾಳು ಶಾನವಿಯ ಮೇಲೆ ದ್ವೇಷ ಬೆಳೆಸಿಕೊಂಡಿದ್ದಳು. ಆ ದ್ವೇಷದಿಂದಲೇ ಆಕೆಯನ್ನು ಮೇಲ್ಛಾವಣಿಯಿಂದ ತಳ್ಳಿದ್ದಾಳೆ ಎಂದು ಅಜ್ಜಿ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಸಂಬಂಧ ಗಾಂಧಿಗಂಜ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News