×
Ad

ನೀಟ್ ಪರೀಕ್ಷೆ; ಬೀದರ್‌ನ ವಿಸಡ್ಂ ಕಾಲೇಜಿಗೆ ಉತ್ತಮ ಫಲಿತಾಂಶ

Update: 2025-06-15 17:12 IST

ಬೀದರ್ : ನೀಟ್ ಪರೀಕ್ಷೆಯಲ್ಲಿ ವಿಸಡ್ಂ ಪದವಿಪೂರ್ವ ವಿಜ್ಞಾನ ಕಾಲೇಜಿಗೆ ಉತ್ತಮ ಫಲಿತಾಂಶ ಬಂದಿದೆ ಎಂದು ಕಾಲೇಜಿನ ಕಾರ್ಯದರ್ಶಿ ಮಹಮ್ಮದ್ ಆಸಿಫೊದ್ದೀನ್ ತಿಳಿಸಿದ್ದಾರೆ.

ಕೆಟೆಗರಿ ವಿಭಾಗದಲ್ಲಿ ಮುಹಮ್ಮದ್ ಇಸ್ಮಾಯಿಲ್ 6,266 ನೇ ರ‍್ಯಾಂಕ್, ಮಹೆಕ್ ಕೌಸರ್ 10,754 ನೇ ರ‍್ಯಾಂಕ್, ಶಹಾನಾ ಫಿರ್ದೋಸ್ 20,343ನೇ ರ‍್ಯಾಂಕ್, ಸೈಯದ್ ಫೈಝಾನುದ್ದಿನ್ 31,323ನೇ ರ‍್ಯಾಂಕ್, ಮದಿಹಾ ಕೌಸ್ 34,585ನೇ ರ‍್ಯಾಂಕ್ ಹಾಗೂ ತಹಿನಿಯತ್ ಶಮ್ಸ್ 51,147ನೇ ರ‍್ಯಾಂಕ್ ಗಳಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮೀಸಲಾತಿ ಅನ್ವಯ ಕಾಲೇಜಿನ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಂಬಿಬಿಎಸ್ ಹಾಗೂ ಬಿಡಿಎಸ್ ಸೀಟು ಪಡೆಯಲಿದ್ದಾರೆ. 60ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಬಿಎಎಂಎಸ್, ಬಿಯುಎಂಎಸ್ ಹಾಗೂ ಬಿಎಚ್‍ಎಂಎಸ್ ಸೀಟು ಸಿಗುವ ನಿರೀಕ್ಷೆ ಇದೆ. ನೀಟ್‌ನಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಹತೆ ಗಳಿಸಿದ್ದಾರೆ ಎಂದು ತಿಳಿಸಿದ್ದಾರೆ.




Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News