×
Ad

ಬೀದರ್ | 5 ಪೊಲೀಸ್ ಠಾಣೆಗಳಿಗೆ ಹೊಸ ಬೊಲೆರೊ ವಾಹನ ಹಸ್ತಾಂತರಿಸಿದ ಸಚಿವ ಈಶ್ವರ್ ಖಂಡ್ರೆ

Update: 2025-05-29 18:33 IST

ಬೀದರ್‌: ಭಾಲ್ಕಿ ತಾಲೂಕಿನ ಪೊಲೀಸ್ ಠಾಣೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು 5 ಹೊಸ ಬೊಲೆರೊ ವಾಹನ ಹಸ್ತಾಂತರಿಸಿದರು.

ಗುರುವಾರ ಭಾಲ್ಕಿಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಬೊಲೆರೊ ವಾಹನಗಳನ್ನು ಹಸ್ತಾಂತರ ಮಾಡಿ ಮಾತನಾಡಿದ ಈಶ್ವರ್ ಖಂಡ್ರೆ, ಪೊಲೀಸರು ಜನ ಸ್ನೇಹಿಯಾಗಿ ಹಾಗೂ ತ್ವರಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಭಾಲ್ಕಿ ತಾಲೂಕಿನ ಸಾರ್ವಜನಿಕರ ಸುರಕ್ಷತೆ ಮತ್ತು ಶಾಂತಿಯುತ ಸಮಾಜ ನಿರ್ಮಾಣದ ದೃಷ್ಟಿಯಿಂದ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನದ ಮೂಲಕ 5 ಹೊಸ ಪೊಲೀಸ್ ವಾಹನಗಳನ್ನು ಖರೀದಿಸಲಾಗಿದೆ ಎಂದು ಹೇಳಿದರು.

ಸಚಿವರು ಮೇಹಕರ್, ಖಟಕ್ ಚಿಂಚೋಳಿ, ಧನ್ನೂರ್, ಭಾಲ್ಕಿ ನಗರ ಹಾಗೂ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಗಳಿಗೆ ತಲಾ ಒಂದರಂತೆ ಪೊಲೀಸ್ ವಾಹನಗಳನ್ನು ಹಸ್ತಾಂತರ ಮಾಡಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News