ಬೀದರ್ ನಗರದಲ್ಲಿ ಎಕ್ಸ್‌ಪರ್ಟ್ ಡಯಾಗ್ನೋಸ್ಟಿಕ್ ಸೆಂಟರ್ ಉದ್ಘಾಟನೆ ಮಾಡಿದ ಸಚಿವ ಈಶ್ವರ್ ಖಂಡ್ರೆ
Update: 2025-08-29 20:35 IST
ಬೀದರ್ : ಬೀದರ್ ನಗರದಲ್ಲಿ 'ಎಕ್ಸ್‌ಪರ್ಟ್ ಡಯಾಗ್ನೋಸ್ಟಿಕ್' ಸೆಂಟರ್ ಅನ್ನು ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಉದ್ಘಾಟನೆ ಮಾಡಿದರು.
ಉದ್ಘಾಟನೆ ಮಾಡಿ ಮಾತನಾಡಿದ ಅವರು, ಬೀದರ್ ಜಿಲ್ಲೆಯ ಜನರು ಎಕ್ಸ್‌ಪರ್ಟ್ ಡಯಾಗ್ನೋಸ್ಟಿಕ್ ಸೆಂಟರ್ ನ ಉಪಯೋಗ ಪಡೆದುಕೊಳ್ಳಬೇಕು. ಅಪಘಾತದಂತಹ ಘಟನೆಗಳು ಸಂಭವಿಸಿದಾಗ ಜನರಿಗೆ ಇದು ಉಪಯೋಗವಾಗುತ್ತದೆ. ಎಕ್ಸ್‌ಪರ್ಟ್ ಡಯಾಗ್ನೋಸ್ಟಿಕ್ ನಿಂದ ಜನರ ಪ್ರಾಣ ಉಳಿಯುವಂತಾಗಬೇಕು. ಬೀದರ್ ನಗರವು ಆರೋಗ್ಯವಂತರ ನಗರವಾಗಲು ಎಕ್ಸ್‌ಪರ್ಟ್ ಡಯಾಗ್ನೋಸ್ಟಿಕ್ ಯೋಗದಾನ ತುಂಬಾ ಮುಖ್ಯವಾದದ್ದಾಗಿದೆ ಎಂದು ಎಕ್ಸ್‌ಪರ್ಟ್ ಡಯಾಗ್ನೋಸ್ಟಿಕ್ ಸೆಂಟರ್ ಗೆ ಶುಭಾಶಯಗಳು ತಿಳಿಸಿದರು.
ಸಿರಾಜುದ್ದಿನ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಪೌರಾಡಳಿತ ಸಚಿವ ರಹೀಮ್ ಖಾನ್, ಸಂಸದ ಸಾಗರ್ ಖಂಡ್ರೆ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ಡಾ.ಸೈಯದ್ ಅಬ್ರಹಾರ್ ಖಾದ್ರಿ, ಸೈಯದ್ ಮನ್ಸೂರ್ ಅಹಮ್ಮದ್ ಖಾದ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.