ಭಾರೀ ಮಳೆಯಿಂದ ಹಾನಿಗಿಡಾದ ಮನೆಗೆ ಸಚಿವ ಈಶ್ವರ್ ಖಂಡ್ರೆ ಭೇಟಿ
Update: 2025-08-15 19:12 IST
ಬೀದರ್ : ಭಾರೀ ಮಳೆಯಿಂದ ಹಾನಿಗಿಡಾದ ಮನೆಗೆ ಇಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಭೇಟಿ ನೀಡಿದರು.
ನಗರದ ವಿದ್ಯಾನಗರ ಕಾಲೋನಿಯ 11ನೇ ರಸ್ತೆಯಲ್ಲಿರುವ ಕಲ್ಪನಾ ಗಂಡ ಸುನೀಲಕುಮಾರ್ ರೆಡ್ಡಿ ಅವರ ಮನೆಯು ಭಾರೀ ಮಳೆಯಿಂದ ಹಾನಿಗಿಡಾದ ವಿಷಯ ತಿಳಿದು ಅವರು ಭೇಟಿ ನೀಡಿದರು. ಹಾನಿಯಾದವರ ಕುಟುಂಬಕ್ಕೆ ಅವರು ವೈಯಕ್ತಿಕವಾಗಿ 15 ಸಾವಿರ ರೂ. ಹಾಗೂ ಜಿಲ್ಲಾಡಳಿತದಿಂದ 25 ಸಾವಿರ ರೂ. ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ನಗರಸಭೆ ಆಯುಕ್ತ ಶಿವರಾಜ್ ರಾಥೋಡ್, ಬೀದರ್ ಸಹಾಯಕ ಆಯುಕ್ತ ಮೊಹಮದ್ ಶಕೀಲ್ ಹಾಗೂ ತಹಸಿಲ್ದಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.