ಸಚಿವ ರಾಮಲಿಂಗಾರೆಡ್ಡಿ 

ಬೀದರ್: ಬಿಜೆಪಿಯವರು ಕೆಲಸಗಾರರಲ್ಲ ಮಾತುಗಾರರಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಲೆಕ್ಕದಲ್ಲೇ ಇಲ್ಲ. 2029ರಲ್ಲಿ ದೇಶದಲ್ಲೂ ಕೂಡ ಬಿಜೆಪಿ ಧೂಳಿಪಟ ಆಗಿ ಸಂಸತ್ತಿನಲ್ಲಿ ವಿಪಕ್ಷದಲ್ಲಿ ಕುಳಿತುಕೊಳ್ಳುತ್ತದೆ ಎಂದು ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದರು.

ನಗರದಲ್ಲಿ ಬುಧವಾರ ಹೇಮ-ವೇಮ ಸಮುದಾಯ ಭವನ ಉದ್ಘಾಟನೆಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಇವಾಗ ಬಿಡುವಾಗಿದ್ದಾರೆ. ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಪಾದಯಾತ್ರೆ ಮಾಡುತ್ತಿದ್ದಾರೆ. ಅವರು 150ರಿಂದ 200 ಕಿ.ಮೀ ವಾಕ್ ಮಾಡಿದರೆ ಅವರ ಆರೋಗ್ಯನೂ ಸುಧಾರಣೆವಾಗುತ್ತದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿಯವರು ನಾಗೇಂದ್ರ ಅವರ ಮೇಲೆ ಆಪಾದನೆ ಇದೆ ಎಂದು ರಾಜೀನಾಮೆ ಕೇಳುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರದ ಅನೇಕ ಮಂತ್ರಿಗಳ ಮೇಲು ಕೂಡ ಆಪಾದನೆಗಳಿವೆ. ನಮ್ಮ ರಾಜ್ಯದಿಂದ ಕೇಂದ್ರದಲ್ಲಿ ಪ್ರತಿನಿಧಿಸುವಂತಹ ಕೇಂದ್ರದ ಮಂತ್ರಿಗಳ ಮೇಲೂ ಆಪಾದನೆಗಳಿವೆ. ಮೊದಲ ಅವರ ರಾಜೀನಾಮೆ ಕೇಳಬೇಕು. ನಂತರ ಇವರ ರಾಜೀನಾಮೆ ಕೇಳಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಚಿವ ಸಂಪುಟದ ಖಾಲಿ ಉಳಿದ ಒಂದು ಸ್ಥಾನದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಆ ಸ್ಥಾನ ಮಹಿಳೆಯರಿಗೆ ನೀಡಲಾಗುವುದು. ಮಹಿಳೆಯರಿಗೆ ಕೊಡಲೇಬೇಕು. ಹಾಗಾಗಿ ಅವರಿಗೆ ಸಚಿವ ಸ್ಥಾನ ಕೊಡಲಾಗುತ್ತದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor