ಜನಪರ ಕಾಳಜಿಯ 'ವಾರ್ತಾ ಭಾರತಿ' ಪತ್ರಿಕೆಯನ್ನು ಬೆಂಬಲಿಸಬೇಕಿದೆ : ರೇಷ್ಮಾ
ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ ಪ್ರಯುಕ್ತ ಹುಮನಾಬಾದ್‌ನಲ್ಲಿ ಓದುಗರು, ಹಿತೈಷಿಗಳ ಸಭೆ
ಬೀದರ್ : ʼವಾರ್ತಾ ಭಾರತಿ' ಪತ್ರಿಕೆಯು ಜನಪರ ಕಾಳಜಿಯ ಪತ್ರಿಕೆಯಾಗಿದೆ. ಈ ಪತ್ರಿಕೆಯ ಆವೃತ್ತಿ ಬೀದರ್‌ನಲ್ಲಿ ಪ್ರಾರಂಭ ಆಗುವುದು ದೊಡ್ಡ ಸಂತೋಷದ ಸಂಗತಿ. ಯಾವುದೇ ಬೆದರಿಕೆಗೆ ಹೆದರದೆ, ಜೀವದ ಹಂಗನ್ನು ತೊರೆದು ಜನಪರ ಸುದ್ದಿಗಳನ್ನು ಬಿತ್ತರಿಸುವ ಇಂತಹ ಪತ್ರಿಕೆಯನ್ನು ಬೆಂಬಲಿಸಬೇಕಿದೆ ಎಂದು ಅಖಿಲ ಭಾರತೀಯ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ರೇಷ್ಮಾ ಅವರು ಹೇಳಿದರು.
ವಾರ್ತಾಭಾರತಿ ಕಲಬುರಗಿಯಿಂದ ಕಲ್ಯಾಣ ಕರ್ನಾಟ ಆವೃತ್ತಿ ಬಿಡುಗಡೆಯ ಪ್ರಯುಕ್ತ ಹುಮನಾಬಾದ್ ತಾಲೂಕಿನ ರಾಷ್ಟ್ರೀಯ ಕ್ಲಬ್ ನಲ್ಲಿ ಓದುಗರು, ವೀಕ್ಷಕರ ಹಾಗೂ ಹಿತೈಷಿಗಳ ಸಭೆಯಲ್ಲಿ ಮಾತನಾಡಿದ ರೇಷ್ಮಾ, ಈ ಭಾಗದಲ್ಲಿ ಎಲ್ಲಾ ಸಮುದಾಯದವರು ಹೋರಾಟಗಳನ್ನು ಹಮ್ಮಿಕೊಳ್ಳುತ್ತೇವೆ. ದೊಡ್ಡ ದೊಡ್ಡ ಚಾನೆಲ್‌ಗಳು ನಮ್ಮನ್ನು ವಿರೋಧಿಸಿ ಸರಕಾರದ ಪರವಾಗಿ ಅಥವಾ ಜನರ ನೀತಿಗಳ ವಿರುದ್ಧ ಸುದ್ದಿಯನ್ನು ಬಿತ್ತರಿಸುತ್ತಿದೆ. ಆದರೆ 'ವಾರ್ತಾ ಭಾರತಿ' ಪತ್ರಿಕೆಯು ಜನಪರ ಚಳುವಳಿ ಎತ್ತಿ ಹಿಡಿಯುವ ಪತ್ರಿಕೆಯಾಗಿದೆ. ಸತ್ಯವನ್ನು ಎತ್ತಿ ಹಿಡಿಯುವ ಈ ಪತ್ರಿಕೆ ದೊಡ್ಡ ಪ್ರಮಾಣದಲ್ಲಿ ಪ್ರಚಾರವನ್ನು ಪಡೆದುಕೊಳ್ಳಲಿ ಎಂದು ಹೇಳಿದರು.
ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಮಾತನಾಡಿ, ಒಂದು ಪತ್ರಿಕೆ ನಡೆಸುವುದು ಸುಲಭವಲ್ಲ. ಪತ್ರಿಕೆ ನಡೆಸುವುದು ಉದ್ಯಮವಲ್ಲ. ವಾರ್ತಾ ಭಾರತಿ ಪತ್ರಿಕೆಯನ್ನು ಯಾರದೇ ಹಂಗಿಲ್ಲದೆ, ಬೆದರಿಕೆಗಳನ್ನೆಲ್ಲ ಎದುರಿಸಿ ಮುನ್ನಡೆಸುತ್ತಿದ್ದೇವೆ ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತ ಭೀಮರೆಡ್ಡಿ ಸಿಂಧನಕೇರಾ ಮಾತನಾಡಿ, 'ವಾರ್ತಾ ಭಾರತಿ' ಪತ್ರಿಕೆ ಸುಮಾರು 23 ವರ್ಷದಿಂದ ಕಾರ್ಯ ನಿರ್ವಹಿಸುತ್ತಾ ಬಂದಿದೆ. ನಮ್ಮ ಭಾಗಕ್ಕೆ ಕೂಡ ವಾರ್ತಾ ಭಾರತಿಯ ಡಿಜಿಟಲ್ ಸುದ್ದಿಗಳು ಕಳೆದ ಒಂದು ವರ್ಷದಿಂದ ತಲುಪುತ್ತಿದೆ. ವಾರ್ತಾ ಭಾರತಿ ಪತ್ರಿಕೆಯು ಹಳ್ಳಿ ಹಳ್ಳಿಗೂ ಭೇಟಿ ನೀಡಿ ಅಲ್ಲಿನ ಸಮಸ್ಯೆಗೆ ಧ್ವನಿಯಾಗುತ್ತಿದೆ ಎಂದು ಹೇಳಿದರು.
ಝಾಕೀರ್ ಹುಸೈನ್ ಅವರು ಮಾತನಾಡಿ, ಬೇರೆ ಪತ್ರಿಕೆಗಳಿಗೆ ತುಲನೆ ಮಾಡಿ ನೋಡಿದಾಗ ವಾರ್ತಾಭಾರತಿ ಪತ್ರಿಕೆ ಸತ್ಯ ಸುದ್ದಿಯನ್ನು ಬಿತ್ತರಿಸುತ್ತಿದೆ ಎಂಬುದು ಮನವರಿಕೆಯಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಯುವರಾಜ್ ಐಹೊಳಿ, ಗೌಸುದ್ದಿನ್, ಇಫ್ತೆಕಾರ್ ಅಹ್ಮದ್, ಗಗನ ಫುಲೆ, ಲಖನ್ ಮಹಾಜನ್, ಗಣಪತಿ ಅಷ್ಟೂರೆ, ಶಶಿ ಡಾಂಗೆ, ಅದ್ಬುಲ್ ಕರಿಮ್, ಶಿವಕುಮಾರ್, ರಾಹುಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.