ಮೈಸೂರು ದಸರಾದ ಪ್ರಧಾನ ಕವಿಗೋಷ್ಠಿಗೆ ಯುವ ಸಾಹಿತಿ ಡಾ.ಸಂಗಪ್ಪ ತೌಡಿ ಆಯ್ಕೆ
Update: 2025-09-22 22:19 IST
ಬೀದರ್ : ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಪ್ರಧಾನ ಕವಿಗೋಷ್ಠಿಗೆ ಬೀದರ್ ಜಿಲ್ಲೆಯ ಯುವ ಸಾಹಿತಿ ಡಾ. ಸಂಗಪ್ಪ ತೌಡಿ ಅವರನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕ ಸರ್ಕಾರ ಹಾಗೂ ಮೈಸೂರು ಜಿಲ್ಲಾಡಳಿತ ಸಮಿತಿ ಆಯೋಜಿಸುತ್ತಿರುವ ಈ ಕವಿಗೋಷ್ಠಿ ಸೆ. 27ರಂದು ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಜರುಗಲಿದೆ.
ಡಾ. ಸಂಗಪ್ಪ ತೌಡಿ ಅವರು ಈಗಾಗಲೇ ಐದು ಕೃತಿಗಳು ರಚಿಸಿ ಪ್ರಕಟಿಸಿದ್ದಾರೆ. ಪ್ರಸ್ತುತ ಅವರು ಬಿಜಾಪುರ್ ನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಾದೇಶಿಕ ಅಧ್ಯಯನ ಕೇಂದ್ರದಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.