×
Ad

ಬಿಜೆಪಿ ಮುಖಂಡನ ಸುಲಿಗೆ ಪ್ರಕರಣ: ತನಿಖೆ ಚುರುಕು

Update: 2025-06-09 07:53 IST

ಜಿ.ಕೃಷ್ಣಕುಮಾರ್ PC: x.com/actorkk 

ತಿರುವನಂತಪುರಂ: ಭಾರತೀಯ ಜನತಾ ಪಕ್ಷದ ಮುಖಂಡ ಹಾಗೂ ನಟ ಜಿ.ಕೃಷ್ಣಕುಮಾರ್ ಹಾಗೂ ಅತನ ಪುತ್ರಿ ದಿಯಾ ಷಾಮೀಲಾಗಿರುವ ಸುಲಿಗೆ ಪ್ರಕರಣದ ತನಿಖೆಯನ್ನು ಮ್ಯೂಸಿಯಂ ಪೊಲೀಸರು ತೀವ್ರಗೊಳಿಸಿದ್ದಾರೆ.

ಆಭರಣ ಮಳಿಗೆಯ ಮಾಲೀಕರಾಗಿರುವ ತಂದೆ ಹಾಗೂ ಮಗಳ ವಿರುದ್ಧ ಅಪಹರಣ, ಕಿರುಕುಳ ಹಾಗೂ ಸುಲಿಗೆ ಪ್ರಕರಣ ದಾಖಲಾಗಿದ್ದು, ಮೂವರು ಮಾಜಿ ಉದ್ಯೋಗಿಗಳು ಸುಮಾರು 69 ಲಕ್ಷ ರೂಪಾಯಿಗಳನ್ನು ವಂಚಿಸಿದ್ದಾರೆ ಎನ್ನುವುದು ಬಿಜೆಪಿ ಮುಖಂಡನ ಹೇಳಿಕೆ. ದಿಯಾ ಅನುಪಸ್ಥಿತಿಯಲ್ಲಿ ಆಭರಣ ಮಳಿಗೆಯ ಸಿಬ್ಬಂದಿ ಸಂಸ್ಥೆಯ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಕ್ಯೂಆರ್ ಕೋಡ್ ಬದಲಿಸಿ ಬೇರೆ ಕ್ಯೂಆರ್ ಕೊಡ್ ಇರಿಸಿ ತಮ್ಮ ವೈಯಕ್ತಿಕ ಖಾತೆಗೆ ಹಣ ವರ್ಗಾವಣೆಯಾಗುವಂತೆ ಮಾಡಿದ್ದರು ಎನ್ನುವುದು ಕೃಷ್ಣಕುಮಾರ್ ವಾದ.

ಆದರೆ ತೆರಿಗೆ ತಪ್ಪಿಸಿಕೊಳ್ಳುವ ಸಲುವಾಗಿ ದಿಯಾ ಮನವಿಯ ಮೇರೆಗೆ ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗಳನ್ನು ವ್ಯವಹಾರಕ್ಕೆ ಸಂಬಂಧಿಸಿದ ವಹಿವಾಟುಗಳಿಗೆ ಬಳಸಲಾಗಿದೆ ಎಂದು ಮಾಜಿ ಉದ್ಯೋಗಿಗಳಾದ ವಿನೀತಾ, ದಿವ್ಯ ಮತ್ತು ರಾಧಾ ಕುಮಾರ್ ಹೇಳಿದ್ದಾರೆ. ನಿರಂತರವಾಗಿ ತಮಗೆ ಕಿರುಕುಳ ನೀಡಲಾಗುತ್ತಿತ್ತು ಎಂದು ಅವರು ಆಪಾದಿಸಿದ್ದಾರೆ.

ವಾಸ್ತವ ಬಯಲುಗೊಳಿಸಲು ಪ್ರಕರಣದಲ್ಲಿ ಷಾಮೀಲಾದ ಎಲ್ಲರ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಕೆಲ ಅನುಮಾನಾಸ್ಪದ ವಹಿವಾಟುಗಳು ಆರಂಭಿಕ ತನಿಖೆಯ ವೇಳೆ ಗಮನಕ್ಕೆ ಬಂದಿದೆ ಎಂದು ಮೂಲಗಳು ಹೇಳಿವೆ. ಆರೋಪಿಗಳ ಚಲನ ವಲನಗಳನ್ನು ಪತ್ತೆ ಮಾಡಲು ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡಾ ಪರಿಶೀಲಿಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News