×
Ad

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ರನ್ನು ಭೇಟಿಯಾದ ಉದ್ಧವ್‌ ಠಾಕ್ರೆ

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ರನ್ನು ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಭೇಟಿಯಾಗಿದ್ದಾರೆ.

Update: 2023-07-19 15:47 IST



ಮುಂಬೈ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ರನ್ನು ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಭೇಟಿಯಾಗಿದ್ದಾರೆ. ಶರದ್‌ ಪವಾರ್‌ ಬಣದಿಂದ ಪ್ರತ್ಯೇಕವಾಗಿ ಉದ್ಧವ್‌ ಠಾಕ್ರೆಯ ವಿರೋಧಿ ಬಣದೊಂದಿಗೆ ಸೇರಿಕೊಂಡ ಅಜಿತ್‌ ಪವಾರ್‌ ರನ್ನು ಉದ್ಧವ್‌ ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ತಂದಿದೆ.

ಇಬ್ಬರ ನಡುವಿನ ಸಂಪೂರ್ಣ ಸಂಭಾಷಣೆಯ ಮಾಹಿತಿ ಲಭ್ಯವಾಗದಿದ್ದರೂ, ʼಉತ್ತಮವಾಗಿ ಆಡಳಿತ ನಡೆಸುವಂತೆʼ ಉದ್ಧವ್‌ ಠಾಕ್ರೆ ಅಜಿತ್‌ ಪವಾರ್‌ಗೆ ಮನವಿ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News