×
Ad

ಚಾಮರಾಜನಗರ : ಆಹಾರ ಅರಸಿ ದಾರಿ ತಪ್ಪಿ ಮನೆಗೆ ನುಗ್ಗಿದ ಕಡವೆ

Update: 2026-01-28 09:05 IST

ಚಾಮರಾಜನಗರ: ಕಾಡಿನಿಂದ ಆಹಾರ ಅರಸಿ ಬಂದ ಕಡವೆಯೊಂದು ದಾರಿ ತಪ್ಪಿ ಮನೆಯೊಳಗೆ ಪ್ರವೇಶಿಸಿದ ಘಟನೆ ಗುಂಡ್ಲುಪೇಟೆ ತಾಲ್ಲೂಕಿನ ಕುಂದುಗರೆ ವಲಯದ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುಂದುಗರೆ ವಲಯದ ಸಮೀಪದಲ್ಲಿರುವ ಬೊಮ್ಮಲಾಪುರ ಗ್ರಾಮದ ಮನೆಯೊಂದಕ್ಕೆ ಕಡವೆಯೊಂದು ಅಪ್ರತೀಕ್ಷಿತವಾಗಿ ನುಗ್ಗಿದ್ದು, ಮನೆಯಲ್ಲಿದ್ದವರು ಭೀತಿಗೊಳಗಾದರು.

ವಿಷಯ ತಿಳಿದ ತಕ್ಷಣ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಾವುದೇ ಹಾನಿ ಸಂಭವಿಸದಂತೆ ಕಡವೆಯನ್ನು ಸುರಕ್ಷಿತವಾಗಿ ಹಿಡಿದು ಕಾಡಿನೊಳಗೆ ಬಿಡುವಲ್ಲಿ ಯಶಸ್ವಿಯಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News