ರಶ್ಮಿಕಾ ಮಂದಣ್ಣ ಅಭಿನಯದ ‘ಮೈಸಾ’ ಟೀಸರ್ ಬಿಡುಗಡೆ
Photo Credit : imdb.com
ರಶ್ಮಿಕಾ ಮಂದಣ್ಣ ‘ಮೈಸಾ’ ಚಿತ್ರದ ಮೂಲಕ ಪ್ರೇಕ್ಷಕರನ್ನು ಬೆರಗುಗೊಳಿಸಲು ಸಜ್ಜಾಗುತ್ತಿದ್ದಾರೆ. ಹೊಸದಾಗಿ ಬಿಡುಗಡೆಯಾದ ಟೀಸರ್ ತನ್ನ ಮಗಳ ಕೋಪದ ಬಗ್ಗೆ ಸಂಕ್ಷಿಪ್ತವಾಗಿ ಹೇಳುವ ಮಹಿಳೆಯ ನಿರೂಪಣೆಯೊಂದಿಗೆ ಪ್ರಾರಂಭವಾಗುತ್ತದೆ.
ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸಿರುವ ತಾರೆ ರಶ್ಮಿಕಾ ಮಂದಣ್ಣ ತಮ್ಮ ಹೊಸ ಸಿನಿಮಾ ‘ಮೈಸಾ’ದ ಮೊದಲ ಟೀಸರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಬುಡಕಟ್ಟು ಸಮುದಾಯದ ಮಹಿಳೆಯ ಕತೆಯೊಂದಿಗೆ ರಶ್ಮಿಕಾ ತೆರೆ ಮೇಲೆ ಬರುತ್ತಿದ್ದಾರೆ.
ಆ್ಯಕ್ಷನ್ ಸಿನಿಮಾ ಬಿಡುಗಡೆಯಾಗುತ್ತಿರುವ ಬಗ್ಗೆ ವಿವರ ನೀಡಿದ ರಶ್ಮಿಕಾ, “ಇದು ಹಿಮಗಡ್ಡೆಯ ಒಂದು ಚೂರು ಮಾತ್ರ. ಸಂಜೆಯ ಸಮಯಕ್ಕೆ ಮೋಜಿನ ಕೆಲಸ ಎಂದು ಬಿಡುಗಡೆ ಮಾಡಿದ್ದೇವೆ. ಕೆಲವೇ ತಿಂಗಳಲ್ಲಿ ಇದೆಷ್ಟು ಗಂಭೀರವಾದ ಸಿನಿಮಾ ಎನ್ನುವುದು ನಿಮಗೆ ತಿಳಿದುಬರುತ್ತದೆ” ಎಂದು ಅವರು ಬರೆದುಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ‘ಮೈಸಾ’ ಚಿತ್ರದ ಮೂಲಕ ಪ್ರೇಕ್ಷಕರನ್ನು ಬೆರಗುಗೊಳಿಸಲು ಸಜ್ಜಾಗುತ್ತಿದ್ದಾರೆ. ‘ಮೈಸಾ’ ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ, ತೆಲುಗು, ಹಿಂದೆ, ತಮಿಳು ಮುಂತಾದ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕೈಯಲ್ಲಿ ಬೇಡಿ, ಬಂದೂಕು, ಮೈಯೆಲ್ಲಾ ರಕ್ತ, ಮುಖದಲ್ಲಿ ನೋವು, ಆಕ್ರೋಶದ ಜೊತೆಗೆ ರಶ್ಮಿಕಾ ಕಾಣಿಸಿಕೊಂಡಿದ್ದಾರೆ.
‘ಮೈಸಾ’ದಲ್ಲಿ ರಶ್ಮಿಕಾ ಮಂದಣ್ಣ ಅವರ ಪಾತ್ರ ಹೇಗಿರಲಿದೆ ಎಂಬುದನ್ನು ಟೀಸರ್ನಲ್ಲಿ ತೋರಿಸಲಾಗಿದೆ. ಸಿನಿಮಾದ ಕೆಲವು ದೃಶ್ಯಗಳನ್ನು ಬಿಡುಗಡೆ ಮಾಡಲಾಗಿದ್ದು, ಕಥೆಯ ಬಗ್ಗೆ ಅಭಿಮಾನಿಗಳಲ್ಲಿ ಕೌತುಕ ಹೆಚ್ಚುವಂತಾಗಿದೆ. ಹೊಸದಾಗಿ ಬಿಡುಗಡೆಯಾದ ಟೀಸರ್ ತನ್ನ ಮಗಳ ಕೋಪದ ಬಗ್ಗೆ ಸಂಕ್ಷಿಪ್ತವಾಗಿ ಹೇಳುವ ಮಹಿಳೆಯ ನಿರೂಪಣೆಯೊಂದಿಗೆ ಪ್ರಾರಂಭವಾಗುತ್ತದೆ. "ಅವಳ ಹೆಸರನ್ನು ನೆನಪಿಡಿ" ಎಂದು ಜಗತ್ತನ್ನು ಒತ್ತಾಯಿಸುವ ಸಾಲುಗಳು ಧೈರ್ಯ ಮತ್ತು ಭಾವನೆಗಳಿಂದ ತುಂಬಿದ ದೃಶ್ಯದ ಮೂಲಕ ಪ್ರತಿಧ್ವನಿಸುತ್ತವೆ.
ಇದುವರೆಗೆ ತೆರೆಯ ಮೇಲೆ ನೋಡಿದ ರಶ್ಮಿಕಾ ಮಂದಣ್ಣಗಿಂತ ವಿಭಿನ್ನ ರೂಪದಲ್ಲಿ ‘ಮೈಸಾ’ ಸಿನಿಮಾದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ‘ಮೈಸಾ’ ಸಿನಿಮಾದ ಈ ಪಾತ್ರಕ್ಕಾಗಿ ರಶ್ಮಿಕಾ ಮಂದಣ್ಣ ಅವರು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಪ್ರಸ್ತುತ ತೆಲಂಗಾಣ ಹಾಗೂ ಕೇರಳದ ಅರಣ್ಯ ಪ್ರದೇಶಗಳಲ್ಲಿ ‘ಮೈಸಾ’ ಸಿನಿಮಾಗೆ ಚಿತ್ರೀಕರಣ ನಡೆಯುತ್ತಿದೆ.
ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸ್ಟಾರ್ ಹೀರೋಗಳಿಗೆ ನಾಯಕಿಯಾಗಿ ಮಿಂಚಿದ್ದಾರೆ. ಜೊತೆಯಲ್ಲಿಯೇ, ಬೇರೆ ಬೇರೆ ರೀತಿಯ ಸಿನಿಮಾ ಮತ್ತು ಪಾತ್ರಗಳನ್ನು ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆ ಆಗಿದ್ದ ಅವರ ‘ದಿ ಗರ್ಲ್ಫ್ರೆಂಡ್’ ಸಿನಿಮಾ ಗಮನ ಸೆಳೆದಿತ್ತು. ಈಗ ಅವರು ‘ಮೈಸಾ’ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದ್ದಾರೆ.
ರವೀಂದ್ರ ಪುಲ್ಲೆ ಅವರು ‘ಮೈಸಾ’ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರಾಗಿ ಇದು ಅವರ ಮೊದಲ ಸಿನಿಮಾ. ‘ಅನ್‌ಫಾರ್ಮುಲಾ ಫಿಲ್ಮ್ಸ್’ ಸಂಸ್ಥೆಯ ಮೂಲಕ ‘ಮೈಸಾ’ ನಿರ್ಮಾಣವಾಗುತ್ತಿದೆ.
ಈಶ್ವರಿ ರಾವ್, ಗುರು ಸೋಮಸುಂದರಂ, ರಾವ್ ರಮೇಶ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ. ಶ್ರೀಯಾಸ್ ಪಿ ಕೃಷ್ಣ ಅವರ ಛಾಯಾಗ್ರಹಣ, ಜೇಕ್ಸ್ ಬೆಜೋಯ್ ಅವರ ಸಂಗೀತ, ಆಂಡಿ ಲಾಂಗ್ ಅವರ ಸಾಹಸ ನಿರ್ದೇಶನ ಈ ಸಿನಿಮಾದಲ್ಲಿದೆ.