Bigg Boss 20 | ಎದೆನೋವಿನ ನಾಟಕದ ಬಗ್ಗೆ ಸ್ಪಷ್ಟನೆ ನೀಡಿದ ಸಲ್ಮಾನ್ ಖಾನ್
‘ಬಿಗ್ ಬಾಸ್ 20’ಯ ವೀಕೆಂಡ್ ಕಾ ವಾರ್ ಸಂಚಿಕೆಯ ಸಂದರ್ಭದಲ್ಲಿ ಸಲ್ಮಾನ್ ಖಾನ್ ಎದೆನೋವಿನಿಂದ ನೆಲಕ್ಕೆ ಉರುಳಿರುವುದು ಸ್ಪರ್ಧಿಗಳು ಮತ್ತು ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿತ್ತು.
ಸಲ್ಮಾನ್ ಖಾನ್ (Photo: ABP News)
ಈ ಬಾರಿಯ ಹಿಂದಿ ‘ಬಿಗ್ ಬಾಸ್ 20’ರ ವೀಕೆಂಡ್ ಕಾ ವಾರ್ ಸಂಚಿಕೆ ಬಹಳ ಡ್ರಾಮಾಗಳಿಂದ ತುಂಬಿತ್ತು. ನಿರೂಪಕರಾದ ಸಲ್ಮಾನ್ ಖಾನ್ ಟ್ರೋಲಿಂಗ್ ಬಗ್ಗೆ ಮತ್ತು ಸೆಲೆಬ್ರಿಟಿಗಳ ಮೇಲಿನ ಸಾರ್ವಜನಿಕ ಚರ್ಚೆಯ ಕುರಿತಾಗಿಯೂ ಬಹಳ ದೀರ್ಘ ವಿವರಣೆ ನೀಡಿ ಕಿಡಿಕಾರಿದ್ದಾರೆ.
ಸಲ್ಮಾನ್ ಖಾನ್ ಎದೆ ಹಿಡಿದು ನೋವಿನಿಂದ ನೆಲಕ್ಕೆ ಬೀಳುವ ಪ್ರೋಮೋ ಸ್ಪರ್ಧಿಗಳು ಮಗತ್ತು ಅಭಿಮಾನಿಗಳನ್ನು ಕಳವಳಕ್ಕೆ ಒಳಪಡಿಸಿತ್ತು. ಬಿಗ್ ಬಾಸ್ ಸ್ಫರ್ಧಿಯಾದ ಖಾಝಿ ತೌಕೀರ್ ಅವರು ಬಿಗ್ ಬಾಸ್ ಮನೆಯಲ್ಲಿ ತಮಗೆ ಆರೋಗ್ಯ ಸರಿಯಿಲ್ಲ ಎಂದು ಸುಳ್ಳು ಹೇಳಿ ನಾಟಕವಾಡಿದ್ದರು. ಆರೋಗ್ಯದಂತಹ ಗಂಭೀರ ವಿಷಯಗಳ ಬಗ್ಗೆ ತಮಾಷೆ ಮಾಡುವುದು ಎಷ್ಟು ತಪ್ಪು ಎಂಬುದನ್ನು ಖಾಝಿಗೆ ಮನವರಿಕೆ ಮಾಡಿಕೊಡಲು ಸಲ್ಮಾನ್ ಖಾನ್ ಈ ಪ್ರಾತ್ಯಕ್ಷಿಕೆ ಮಾಡಿದ್ದರು. ಆದರೆ ಪ್ರೋಮೋ ಎಡಿಟ್ ಮಾಡಿದ ರೀತಿಯಿಂದಾಗಿ ಸಲ್ಮಾನ್ ಖಾನ್ ಅವರು ನಿಜಕ್ಕೂ ಅಸ್ವಸ್ಥರಾಗಿದ್ದಾರೆ ಎಂದು ಅಭಿಮಾನಿಗಳಲ್ಲಿ ಆತಂಕ ಮೂಡಿತ್ತು.
ನಂತರ ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಡನೆ ನೀಡಿ ಅದೊಂದು ಕೇವಲ ಪ್ರಾಂಕ್ ಎಂದು ತಿಳಿಸಿ. ಪ್ರೋಮೋ ತಪ್ಪಾಗಿ ಕಟ್ ಮಾಡಿದ್ದಕ್ಕಾಗಿ ಕ್ಷಮೆ ಕೋರಿದ್ದಾರೆ.
ಸಲ್ಮಾನ್ ಖಾನ್ ಅವರು ಖಾಝಿ ತೌಕೀರ್ಗೆ ಪಾಠ ಕಲಿಸಲು ಮಾತ್ರವೇ ಎದೆನೋವಿನ ನಾಟಕ ಆಡಿದ್ದರು. ಬಿಗ್ ಬಾಸ್ ಮನೆಯ ಒಳಗಡೆ ಖಾಜಿ ತೌಕೀರ್ ತಮ್ಮದ ಆದ ರಹಸ್ಯ ಆಟವನ್ನು ಆಡುತ್ತಿದ್ದರು. ಹಿಂದಿನ ಸಂಚಿಕೆಯಲ್ಲಿ ತಮಗೆ ಆರೋಗ್ಯ ಸರಿಯಿಲ್ಲ ಮತ್ತು ‘ಮಲ್ಟಿಪಲ್ ಪರ್ಸನಾಲಿಟಿ ಡಿಸಾರ್ಡರ್’ ಇದೆ ಎಂದು ಸಹ ವಾದಿಸಿದ್ದರು. ಆದರೆ ಬಿಗ್ ಬಾಸ್ ಆತನನ್ನು ವೈದ್ಯಕೀಯ ತಪಾಸಣೆಗಾಗಿ ವೈದ್ಯರ ಕೋಣೆಗೆ ಕರೆಸಿದಾಗ, ತಾವು ಕೇವಲ ಇತರ ಸ್ಪರ್ಧಿಗಳ ಜೊತೆಗೆ ತಮಾಷೆ ಮಾಡುತ್ತಿರುವುದಾಗಿ ಖಾಝಿ ಬಹಿರಂಗಪಡಿಸಿದ್ದಾರೆ.
ವೈದ್ಯರ ಕೋಣೆಯಿಂದ ಹೊರನಡೆದು “ಔಷಧಿ ಸೇವಿಸಿದ್ದೇನೆ ಮತ್ತು ಆರೋಗ್ಯವಾಗಿದ್ದೇನೆ” ಎಂದು ಚೆಲ್ಲಾಟ ಮುಂದುವರಿಸಿದರು. ಹೀಗಾಗಿ ಸಲ್ಮಾನ್ ಅದೇ ಪ್ರಾಂಕ್ ಅನ್ನು ಖಾಝಿ ಜೊತೆಗೆ ಶನಿವಾರದ ʼವೀಕೆಂಡ್ ಕಾ ವಾರ್ʼ ಕಾರ್ಯಕ್ರಮದಲ್ಲಿ ಹಿಂತಿರುಗಿಸಿದ್ದಾರೆ. ಸಲ್ಮಾನ್ ಖಾನ್ ಎದೆ ಹಿಡಿದುಕೊಂಡು ನೋವಿನಿಂದ ಒದ್ದಾಡುವಂತೆ ನಟಿಸಿದರು. “ಏನೋ ಅನಾಹುತವಾಗಿದೆ” ಎಂದು ಎಲ್ಲರೂ ಆತಂಕಪಡುವಂತೆ ಮಾಡಿದರು. ಆದರೆ ಎಲ್ಲವೂ ಪ್ರಾಂಕ್ನ ಭಾಗವಾಗಿತ್ತು. “ಆರೋಗ್ಯದ ವಿಚಾರದಲ್ಲಿ ತಮಾಷೆ ಮಾಡುವುದು ಇತರರ ಮೇಲೆ ಎಂತಹ ಪರಿಣಾಮ ಬೀರುತ್ತದೆ” ಎಂದು ಖಾಝಿಗೆ ಮನವರಿಗೆ ಮಾಡಲು ತಾವು ನಟಿಸಿದ್ದಾಗಿ ನಂತರ ಸಲ್ಮಾನ್ ಹೇಳಿದ್ದಾರೆ.
ನಂತರ ಬಿಗ್ ಬಾಸ್ ವೀಕೆಂಡ್ ಕಾ ವಾರ್ ಸಂದರ್ಭದಲ್ಲಿ ಎದೆ ನೋವಿನ ಬಗ್ಗೆ ತಮಾಷೆ ಮಾಡಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಲ್ಮಾನ್ ಖಾನ್ ಸ್ಪಷ್ಟನೆ ನೀಡಿದ್ದಾರೆ. “ದೇವರ ದೆಯೆಯಿಂದ ನನ್ನ ಆರೋಗ್ಯಕ್ಕೆ ಏನೂ ತೊಂದರೆಯಾಗಿಲ್ಲ. ಬಿಗ್ ಬಾಸ್ ಪ್ರೋಮೋವನ್ನು ಆ ರೀತಿ ಕಟ್ ಮಾಡಬಾರದಿತ್ತು. ಇದು ಉದ್ದೇಶವನ್ನು ಸಂಪೂರ್ಣ ಮೀರಿಸುತ್ತದೆ. ಮೂಲ ಆಶಯಕ್ಕೆ ಧಕ್ಕೆಯಾಗಿದೆ. ಮನೆಯಲ್ಲಿ ಖಾಝಿ ಮಾಡುತ್ತಿದ್ದ ಕೆಲಸ ನಾನು ಮಾಡುತ್ತಿರುವಂತೆ ತೋರುತ್ತದೆ. ಖಾಝಿ ತಮ್ಮ ಆರೋಗ್ಯವನ್ನು ಮನರಂಜನೆಗಾಗಿ ಬಳಸುತ್ತಿರುವುದು ತಪ್ಪು ಎಂದು ತೋರಿಸಲು ನಾನು ನಾಟಕವಾಡಿದ್ದೆ. ಮನೆಯಲ್ಲಿರುವ 15 ಮಂದಿಗೆ ಅವರ ಆರೋಗ್ಯದ ಬಗ್ಗೆ ತಿಳಿಯದೆ ಆತಂಕಗೊಂಡಿದ್ದರು. ಪ್ರೋಮೋವನ್ನು ಈ ರೀತಿ ಕಟ್ ಮಾಡಿರುವುದಕ್ಕೆ ಕ್ಷಮಿಸಿ. ಕಾರ್ಯಕ್ರಮವನ್ನು ಪ್ರಚಾರ ಮಾಡುವಾಗ ಬಳಸುವ ಸ್ವರೂಪವಿದು ಎಂದು ಊಹಿಸಿಕೊಳ್ಳಿ. ಅವರ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ” ಎಂದು ಹೇಳಿದ್ದಾರೆ.