ರಣವೀರ್ ಸಿಂಗ್ ಮತ್ತು ಫರ್ಹಾನ್ ಆಖ್ತರ್ ನಡುವಿನ ವಿವಾದ ಪರಿಹರಿಸಲು ಮಧ್ಯವರ್ತಿಯಾದ ಸಲ್ಮಾನ್ ಖಾನ್; ವರದಿ
ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ನಟ-ನಿರ್ದೇಶಕ ಫರ್ಹಾನ್ ಅಖ್ತರ್ ನಡುವೆ ‘ಡಾನ್ 3’ಗೆ ಸಂಬಂಧಿಸಿ ಸೃಷ್ಟಿಯಾಗಿರುವ ಉದ್ವಿಗ್ನತೆಯನ್ನು ಪರಿಹರಿಸಲು ಸಲ್ಮಾನ್ ಖಾನ್ ಸ್ವತಃ ಮುಂದೆ ಬಂದಿದ್ದಾರೆ ಎಂದು ವರದಿಯಾಗಿದೆ.
ಇಬ್ಬರ ನಡುವಿನ ಭಿನ್ನಾಭಿಪ್ರಾಯ ಸಾರ್ವಜನಿಕವಾಗಿ ಚರ್ಚೆಯಾಗುವುದು ಮತ್ತು ದೀರ್ಘಕಾಲೀನ ವೃತ್ತಿಪರ ಸಂಬಂಧಗಳಿಗೆ ಹಾನಿಯಾಗದಂತೆ ತಡೆಯಲು ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸ್ವತಃ ಇಬ್ಬರನ್ನೂ ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ.
ʼಬಾಲಿವುಡ್ ಹಂಗಾಮʼದಲ್ಲಿ ವರದಿಯಾಗಿರುವ ವಿವರಗಳ ಪ್ರಕಾರ ಸಲ್ಮಾನ್ ಖಾನ್ ಅವರು ರಣವೀರ್ ಸಿಂಗ್ ಮತ್ತು ಫರ್ಹಾನ್ ಅಖ್ತರ್ ಅವರನ್ನು ಪ್ರತ್ಯೇಕವಾಗಿ ಸಂಪರ್ಕಿಸಿ ಮಾತನಾಡಿದ್ದಾರೆ.
ಸಲ್ಮಾನ್ ಖಾನ್ ರಣವೀರ್ ಸಿಂಗ್ ಮತ್ತು ಫರ್ಹಾನ್ ಅಖ್ತರ್ ಇಬ್ಬರ ಕುಟುಂಬಕ್ಕೂ ಆಪ್ತರು. ಹೀಗಾಗಿ ಭವಿಷ್ಯದ ಯೋಜನೆಗಳಿಗೆ ಧಕ್ಕೆಯಾಗದಂತೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ತಿಳಿ ಹೇಳಿದ್ದಾರೆ. ದಶಕಗಳಿಂದ ಉದ್ಯಮದಲ್ಲಿ ಸೃಜನಶೀಲ ವ್ಯತ್ಯಾಸಗಳು ಸಾಮಾನ್ಯ ವಿಷಯವಾಗಿದೆ. ರಣವೀರ್ ಅವರ ನಿಲುವನ್ನು ಅರ್ಥಮಾಡಿಕೊಂಡು ದೀರ್ಘ ಮಾತುಕತೆ ನಡೆಸಿದ್ದಾರೆ. ತಕ್ಷಣದ ಆಕ್ರೋಶದಲ್ಲಿ ನಿರ್ಧಾರ ಕೈಗೊಳ್ಳುವ ಬದಲು ವಿಶಾಲ ದೃಷ್ಟಿಕೋನದಲ್ಲಿ ಸಮಸ್ಯೆಯನ್ನು ಪರಿಹರಿಸುವಂತೆ ಸಲ್ಮಾನ್ ತಿಳಿಸಿದ್ದಾರೆ.
ಇಬ್ಬರೂ ಒಂದೇ ಉದ್ಯಮದಲ್ಲಿ ಕೆಲಸ ಮಾಡುತ್ತಿರುವುದನ್ನು ಗಮನದಲ್ಲಿರಿಸಿ ವ್ಯಾಜ್ಯದ ಬಿಸಿ ಕಡಿಮೆಯಾದ ನಂತರ ಮತ್ತೊಂದು ಯೋಜನೆಯಲ್ಲಿ ಜೊತೆಯಾಗಿ ಕೆಲಸ ಮಾಡುವಂತೆ ಸಲಹೆ ನೀಡಿದ್ದಾರೆ.
ಬಾಹ್ಯ ಸಂಸ್ಥೆಗಳನ್ನು ಒಳಗೊಳ್ಳುವುದು ಅಥವಾ ಈ ವಿಷಯವು ಯಾವುದೇ ರೀತಿಯ ಕಾನೂನು ಅಥವಾ ಸಾಂಸ್ಥಿಕ ವಿವಾದವಾಗಿ ಉಲ್ಬಣಗೊಳ್ಳಲು ಬಿಡುವ ಬದಲು ಸಂಬಂಧಿತ ವ್ಯಕ್ತಿಗಳು ಪರಸ್ಪರ ಮಾತುಕತೆಯಲ್ಲಿ ಖಾಸಗಿಯಾಗಿ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದು ಉತ್ತಮ ಎಂದು ಸಲ್ಮಾನ್ ಖಾನ್ ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ.
‘ಡಾನ್ 3’ ವಿವಾದದ ಪ್ರಸ್ತುತ ಸ್ಥಿತಿ:
ವರದಿಯ ಪ್ರಕಾರ ರಣವೀರ್ ಮತ್ತು ಫರ್ಹಾನ್ ಇಬ್ಬರೂ ಸಲ್ಮಾನ್ ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಪರಸ್ಪರ ಮಾತುಕತೆಯಲ್ಲಿ ವಿವಾದವನ್ನು ಪರಿಹರಿಸಿಕೊಳ್ಳುವ ಬಗ್ಗೆ ಮಾರ್ಗ ಹುಡುಕುತ್ತಿದ್ದಾರೆ. ಈ ನಡುವೆ ‘ಡಾನ್ 3’ ಚಿತ್ರದ ಅನಿಶ್ಚಿತ ಹಂತದಲ್ಲಿ ಸಲ್ಮಾನ್ ಅವರು ಫರ್ಹಾನ್ ಅವರನ್ನು ಬೆಂಬಲಿಸಿದ್ದಾರೆ. ‘ಧುರಂಧರ್’ ಚಿತ್ರದ ಯಶಸ್ಸಿನ ನಂತರ ರಣವೀರ್ ತಮ್ಮ ಶಕ್ತಿಯನ್ನು ಹೊಸ ಯೋಜನೆಗಳಿಗೆ ಹರಿಸುವುದನ್ನು ಅವರು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಬಾಲಿವುಡ್ ನ ಆಂತರಿಕ ಸಮಸ್ಯೆಗಳನ್ನು ಮುಚ್ಚಿದ ಬಾಗಿಲ ಒಳಗೆ ಪರಿಹರಿಸಿಕೊಳ್ಳಬೇಕು ಎಂದು ನಂಬಿರುವ ಸಲ್ಮಾನ್ ಖಾನ್ ಅವರು ಅನಗತ್ಯ ಒತ್ತಡ ಅಥವಾ ದೀರ್ಘಕಾಲದ ಸಂಘರ್ಷವಿಲ್ಲದೆ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ನೆರವಾಗಲು ಬಯಸಿದ್ದಾರೆ ಎಂದು ವರದಿಯಾಗಿದೆ.