×
Ad

ವಿಟ್ಲ: ಪದವಿಪೂರ್ವ ಕಾಲೇಜಿನ ನಿವೃತ್ತ ಅಧ್ಯಾಪಕ ಸುಬ್ರಹ್ಮಣ್ಯ ಭಟ್ ನಿಧನ

Update: 2023-08-11 14:59 IST

ವಿಟ್ಲ: ಪದವಿಪೂರ್ವ ಕಾಲೇಜಿನ ನಿವೃತ್ತ ಅಧ್ಯಾಪಕ ವಿಟ್ಲಪಡ್ನೂರು ಗ್ರಾಮದ ಚನಿಲ ನಿವಾಸಿ ಸುಬ್ರಹ್ಮಣ್ಯ ಭಟ್ (63) ರವರು ಇಂದು ನಿಧನರಾದರು.

ಸುಬ್ರಹ್ಮಣ್ಯ ಭಟ್ ರವರು ಲೋ ಬಿ.ಪಿ.ಸಮಸ್ಯೆಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ನಿನ್ನೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಹೃದಯಾಘಾತದಿಂದಾಗಿ ಇಂದುನಿಧನರಾಗಿದ್ದಾರೆ.

 ಹವ್ಯಾಸಿ ಯಕ್ಷಗಾನ ಕಲಾವಿದರೂ ಆಗಿರುವ ಸುಬ್ರಹ್ಮಣ್ಯ ಭಟ್ ರವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News