ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನೆ
ಮಂಗಳೂರು, ಸೆ.11: ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಸಭೆಯು ತಾಪಂ ಸಭಾಂಗಣದಲ್ಲಿ ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಅಧ್ಯಕ್ಷ ಸುರೇಂದ್ರ ಕಂಬಳಿ ಅಧ್ಯಕ್ಷತೆಯಲ್ಲಿ ನಡೆಯಿತು.
ಮಂಗಳೂರು-ಅದ್ಯಪಾಡಿ ಸರಕಾರಿ ಬಸ್ ಪ್ರಸ್ತುತ ಸ್ಥಗಿತಗೊಂಡಿದೆ. ಪುನ: ಪ್ರಾರಂಭಿಸುವಂತೆ ಮನವಿ ಸ್ವೀಕರಿಸಲಾಯಿತು.
ಮಂಗಳೂರಿನಿಂದ-ಗುರುಪುರ-ಕೈಕಂಬ ಮಾರ್ಗವಾಗಿ ಕಟೀಲು ಕ್ಷೇತ್ರಕ್ಕೆ ಸರಕಾರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸದಸ್ಯರು ಸಭೆಯಲ್ಲಿ ಬೇಡಿಕೆ ಇಟ್ಟಾಗ ಈ ಬಗ್ಗೆ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಮಂಗಳೂರು ಕೆಎಸ್ಸಾರ್ಟಿಸಿ ಸಹಾಯಕ ವ್ಯವಸ್ಥಾಪಕಿ ನಿರ್ಮಲ ಎ. ತಿಳಿಸಿದರು.
ಸಭೆಯಲ್ಲಿ ಮಂಗಳೂರು ತಾಪಂ ಇಒ ಮಹೇಶ್ ಕುಮಾರ್ ಹೊಳ್ಳ, ತಾಪಂ ಸಹಾಯಕ ಲೆಕ್ಕಾಧಿಕಾರಿ ಪರಮೇಶ್ವರ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಅಲ್‌ಸ್ಟನ್ ಡಿಕುನ್ಹ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ರಾಜೇಶ್ ಶೆಟ್ಟಿ, ಪ್ರಶಾಂತ್ ಎಸ್, ನವಾಝ್, ಶೈಲಾ ನೀತಾ ಡಿಸೋಜ, ಮುಹಮ್ಮದ್ ರಫೀಕ್, ರಿತೇಶ್ ಅಂಚನ್, ಜಯಂತಿ, ವಿದ್ಯಾ, ಶ್ರೀಧರ ಪಂಜ ಮತ್ತಿತರರು ಉಪಸ್ಥಿತರಿದ್ದರು.