×
Ad

ಕೃಷ್ಣಾಪುರ ಇಸ್ಲಾಮಿಕ್ ಸೋಶಿಯಲ್ ವೆಲ್ಫೇರ್ ಅಸೋಸಿಯೇಶನ್ ಮಹಾಸಭೆ

Update: 2025-10-27 19:30 IST

ಮಂಗಳೂರು, ಅ.27: ಕೃಷ್ಣಾಪುರ ಇಸ್ಲಾಮಿಕ್ ಸೋಶಿಯಲ್ ವೆಲ್ಫೇರ್ ಅಸೋಸಿಯೇಶನ್‌ನ ವಾರ್ಷಿಕ ಕಿಶ್ವ ಮೀಟ್ ಮತ್ತು ಮಹಾಸಭೆಯು ಇತ್ತೀಚಿಗೆ ಸೌದಿ ಅರೇಬಿಯಾದ ಅಲ್ ಜುಬೈಲ್ ನ ಫೈವ್ ಸ್ಟಾರ್ ರೆಸಾರ್ಟ್‌ನಲ್ಲಿ ಜರುಗಿತು.

ಸಭೆಯನ್ನು ಉದ್ಘಾಟಿಸಿದ ಎಚ್‌ಎನ್‌ಜಿಸಿ ಇದರ ಸಿಇಒ ಹಾಜಿ ಇಸ್ಮಾಯಿಲ್ ಮಾತನಾಡಿ ಕೃಷ್ಣಾಪುರ ಪರಿಸರದ ಸಮುದಾಯದ ಬಡವರ ಕಷ್ಟಗಳಿಗೆ ಸ್ಪಂದಿಸಬೇಕೆಂಬ ಉದ್ದೇಶವನ್ನಿಟ್ಟುಕೊಂಡು 2020ರಲ್ಲಿ ಸೌದಿ ಅರೇಬಿಯಾ ದಲ್ಲಿ ಹುಟ್ಟಿಕೊಂಡ ಕಿಶ್ವ ಸಂಘಟನೆಯು ಎಲ್ಲ ಸದಸ್ಯರ ನೆರವಿನೊಂದಿಗೆ ಉತ್ತಮವಾದ ಸೇವೆಯನ್ನು ಮಾಡುತ್ತಿದೆ. ಮುಂದೆಯೂ ಬಡವರ ನೆರವಿಗಾಗಿ ಉತ್ತಮ ಯೋಜನೆಗಳನ್ನು ಹಾಕಿಕೊಂಡಿದೆ ಎಂದರು.

ಕಿಸ್ವ ಅಧ್ಯಕ್ಷ ಕಬೀರ್ ಕೆ.ಎಂ. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಜಮಾತ್ 2024-2025ನೇ ಸಾಲಿನ ಲೆಕ್ಕಪತ್ರ ಮಂಡಿಸಿದರು. 45 ಮಂದಿ ಸದಸ್ಯರಿರುವ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಮುಬೀನ್ ಕೃಷ್ಣಾಪುರ, ಉಪಾಧ್ಯಕ್ಷರಾಗಿ ಫೈಝಲ್ ಎಫ್‌ಎನ್ ಮತ್ತು ಇಬ್ರಾಹಿಂ ರಾಕ, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಅಬ್ದುಲ್ ಖಾದರ್, ಕಾರ್ಯದರ್ಶಿಯಾಗಿ ಬಿಎ ಅಬೂಸಾಲಿ ಮತ್ತು ಆರಿಫ್ ಬದ್ರಿಯಾ, ಕೋಶಾಧಿಕಾರಿಯಾಗಿ ಇಮ್ತಿಯಾಝ್ ಎಚ್‌ಎನ್‌ಜಿಸಿ ಆಯ್ಕೆಯಾದರು.

ಅನ್ವರ್ ಜಾಕ್ ಕಿರಾಅತ್ ಪಠಿಸಿದರು. ಸದಸ್ಯ ಬಿಎ ಅಬೂಸಾಲಿ ಸ್ವಾಗತಿಸಿದರು.ಕೆಸಿ ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಖಾದರ್ ಬಾಂಬೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News