×
Ad

ಮಂಗಳೂರು : 21 ಪಿಎಸ್‌ಐಗಳ ನೇಮಕ

Update: 2025-09-10 20:27 IST

ಮಂಗಳೂರು: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) ಪುರುಷ ಮತ್ತು ಮಹಿಳೆ, ಸೇವಾನಿರತ, ಮಿಕ್ಕುಳಿದ ವೃಂದದ ಮತ್ತು ಕಲ್ಯಾಣ ಕರ್ನಾಟಕ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಲ್ಲಿ ಮಂಗಳೂರು ನಗರಕ್ಕೆ 21 ಮಂದಿಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ನೇಮಕಗೊಳಿಸಿ ಆದೇಶ ನೀಡಿದ್ದಾರೆ.

ನೇಮಕಗೊಂಡಿರುವ ನೂತನ ಪೊಲೀಸ್ ಉಪನಿರೀಕ್ಷಕರ ವಿವರ ಇಂತಿವೆ:-

ಮೋಹನ್ ವಿ (ಮಲ್ಲಸಂದ್ರ, ಕೋಲಾರ), ವಿನೋದ್ ಸುಭಾಷ್ ಬಾಗೋಜಿ (ಮುನ್ಯಾಳ್, ಬೆಳಗಾವಿ) , ಸಂಜಯ್ ವಿಜಯ್ ನಾಯಕ್( ಅಂಕೋಲಾ, ಉತ್ತರ ಕನ್ನಡ), ಪವನ್ ಕುಮಾರ್ ಕೆ.ಎಸ್( ಹೊಸನಗರ, ಶಿವಮೊಗ್ಗ ), ಸುದರ್ಶನ ಗೌಡ ಸಿ.ಎಂ (ಬಂಗಾರಪೇಟೆ, ಕೋಲಾರ) , ಸಿದ್ದು ಕನಾಲ್( ಕನಕನಗರ, ವಿಜಯಪುರ) ಭರತೇಶ್ ಕಡಕೋಲ್( ಜಮಖಂಡಿ, ಬಾಲಕೋಟೆ), ಮಲ್ಲಪ್ಪ ಶಿವೋರ್( ಸಿಂಧಗಿ ,ವಿಜಯಪುರ) , ಸಂತೋಷ್ ಕುಮಾರ್.ಜಿ (ಕೋರಮಂಗಳ, ಬೆಂಗಳೂರು ದಕ್ಷಿಣ ), ಶಿವುಕಾಂತಾ (ಮಾನ್ವಿ , ರಾಯಚೂರು) , ನವೀನ್.ಎಸ್( ಕುರುಬರಹಳ್ಳಿ, ಬೆಂಗಳೂರು ಉತ್ತರ) ಪವನ್ ಬಿ. ಚಕ್ರಸಾಲಿ(ಕುಂಚೂರ್, ಹಾವೇರಿ), ಡಿ.ಮಾನಸಿಂಗ ನಾಯ್ಕ್(ದೋಪದಹಳ್ಳಿ ತಾಂಡ , ವಿಜಯನಗರ), ಅಲ್ಲಾಬಕ್ಷಾ ಗೋಗಡಿ (ಕಾಳಿಕಾದೇವಿ ನಗರ, ವಿಜಾಪುರ), ಸಿಂಧು ಸೋಮಶೇಖರ ಹೆಗ್ಡೆ (ಬಾಳೆಕುಳಿ, ಉತ್ತರಕನ್ನಡ) ಶ್ರೀದೇವಿ ಹಿರೆಕೋಲ್( ರಾಮನಹಳ್ಳಿ, ವಿಜಯಪುರ) , ಅಶ್ವಿನಿ ಬಸು ಚವಾಣ್( ಅಥೆನಿ, ಬೆಳಗಾವಿ) , ಸೀಮಾ ಸರ್ವತಿ ಅಂಜುಂ .ಕೆ( ಭದ್ರಾವತಿ, ಶಿವಮೊಗ್ಗ), ವಿಜಯಕುಮಾರ್.ಎಚ್( ಬೆಳವಾಡಿ, ಮೈಸೂರು) , ಹನುಮಂತರಾಯ (ದೇವದುರ್ಗ ,ರಾಯಚೂರು) ಮಮತಾ ಗೈಬಿನಾಥ್ ಜೋಗಿಸಾ (ಭಾಗ್ಯ ನಗರ, ಬೆಳಗಾವಿ ) ನೇಮಕಗೊಂಡ ಪೊಲೀಸ್ ಉಪನಿರೀಕ್ಷಕರು .

ಈ ನೇಮಕಾತಿ ಆದೇಶ 15 ದಿನಗಳ ಒಳಗಾಗಿ ಅಭ್ಯರ್ಥಿಯು ನೇಮಕಾತಿ ಪ್ರಾಧಿಕಾರಿ ಪೊಲೀಸ್ ಆಯುಕ್ತರು ಮಂಗಳೂರು ಇವರ ಬಳಿ ವರದಿ ಮಾಡಬೇಕು. ನೇಮಕಗೊಂಡವರು ನಿಗದಿತ ಅವಧಿಯೊಳಗಾಗಿ ಹಾಜರಾಗದಿ ದ್ದಲ್ಲಿ ಅಂತವರನ್ನು ಯಾವುದೇ ಸೂಚನೆಯನ್ನು ನೀಡದೆ ಅವರ ನೇಮಕಾತಿ ಆದೇಶವನ್ನು ರದ್ದುಪಡಿಸುವ ಅಂತಿಮ ಅಧಿಕಾರವನ್ನು ನೇಮಕಾತಿ ಪ್ರಾಧಿಕಾರವು ಹೊಂದಿರುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಸೆ.10ರಂದು ನೀಡಿರುವ ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News