ಜ.1: ಪಂಪ್‌ವೆಲ್‌ನಲ್ಲಿ ತಮಾಮ್ ಫರ್ನಿಚರ್ ವರ್ಲ್ಡ್ ಶುಭಾರಂಭ
ಗಳೂರು, ಡಿ.30: ಸ್ಪರ್ಧಾತ್ಮಕ ಗುಣಮಟ್ಟವನ್ನು ಹೊಂದಿರುವ ಪೀಠೋಪಕರಣಗಳ ಮಳಿಗೆ ತಮಾಮ್ ಫರ್ನಿಚರ್ ವರ್ಲ್ಡ್ ನಗರದ ಪಂಪ್‌ವೆಲ್‌ನ ಸಿಟಿ ಗೇಟ್ ಬಿಲ್ಡಿಂಗ್‌ನಲ್ಲಿ ಜ.1ರಂದು ಶುಭಾರಂಭಗೊಳ್ಳಲಿದೆ.
ಬೆಳಗ್ಗೆ 10 ಗಂಟೆಗೆ ಹಿಂದೂಸ್ತಾನ್ ಬಾವ ಬಿಲ್ಡರ್ಸ್‌ನ ಆಡಳಿತ ನಿರ್ದೆಶಕ ಬಾವ ಅಬ್ದುಲ್ ಖಾದರ್ ಮಳಿಗೆಯ ಉದ್ಘಾಟನೆ ನೆರವೇರಿಸಲಿರುವರು.
ಗೌರವಾನ್ವಿತ ಅತಿಥಿಗಳಾಗಿ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್, ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಹಾಸ್ಪಿಟಲ್‌ನ ಸಹಾಯಕ ಆಡಳಿತಾಧಿಕಾರಿ ವಂ.ನೆಲ್ಸನ್ ಧೀರಜ್ ಪಾಯಿಸ್ ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೋಳಂಗಡಿ ಹವ್ವಾ ಮಸ್ಜಿದ್‌ನ ಖತೀಬ್ ಯಹ್ಯಾ ತಂಙಳ್, ಪಂಪ್‌ವೆಲ್ ತಖ್ವಾ ಮಸ್ಜಿದ್‌ನ ಖತೀಬ್ ಯಾಸಿರ್ ಸಖಾಫಿ ಅಲ್ ಅಝರಿ, ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಸಂದೀಪ್ ಗರೋಡಿ, ಡೈಜಿವರ್ಲ್ಡ್ ಮೀಡಿಯಾದ ಆಡಳಿತ ನಿರ್ದೇಶಕ ವಾಲ್ಟರ್ ನಂದಳಿಕೆ, ಗೋಲ್ಡ್ ಕಿಂಗ್ ಫ್ಯಾಶನ್ ಜ್ಯುವೆಲ್ಲರಿಯ ಆಡಳಿತ ನಿರ್ದೇಶಕ ಮುಹಮ್ಮದ್ ಹನೀಫ್, ಜಿಲ್ಲಾ ವಕ್ಫ್ ಬೋರ್ಡ್‌ನ ಅಧ್ಯಕ್ಷ ಬಿ.ಎ.ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಮಂಗಳೂರು ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಬಿ.ಎಂ.ಮುಮ್ತಾಝ್ ಅಲಿ, ಅಬುಧಾಬಿ ಬ್ಯಾರೀಸ್ ವೆಲ್ಫೇರ್ ಫೋರಮ್‌ನ ಪ್ರಧಾನ ಕಾರ್ಯದರ್ಶಿ ಸಿಎ ಅಬ್ದುಲ್ಲಾ ಮಾದುಮೂಲೆ, ಮಂಗಳೂರು ಲೇಡಿಸ್ ಕ್ಲಬ್‌ನ ಕಾರ್ಯದರ್ಶಿ ಜಿನೆಟ್ ಡಿ ಸೋಜ ಭಾಗವಹಿಸಲಿದ್ದಾರೆ.
2008ರಲ್ಲಿ ವ್ಯವಹಾರ ಜಗತ್ತಿಗೆ ಕಾಲಿರಿಸಿದ ತಮಾಮ್ ಸಂಸ್ಥೆ 2008ರಲ್ಲಿ ಪೀಠೋಪಕರಣಗಳ ಉದ್ಯಮದತ್ತ ತನ್ನ ಜಾಲವನ್ನು ವಿಸ್ತರಿಸಿತು. ಇದೀಗ ಉಪ್ಪಳ, ಬಂದ್ಯೋಡು ಮತ್ತು ಉದ್ಯಾವರದಲ್ಲಿ ಮಳಿಗೆಗಳನ್ನು ಹೊಂದಿವೆ ಎಂದು ಪ್ರಕಟಣೆ ತಿಳಿಸಿದೆ.