×
Ad

25ರ ಸಂಭ್ರಮದಲ್ಲಿ ಪೇಸ್ ಗ್ರೂಪ್: ಡಿಸೆಂಬರ್ ವರೆಗೆ ‘ಪೇಸ್ ಸಿಲ್ವಿಯೋರಾ 2025’ ಆಚರಣೆ

Update: 2025-10-15 17:04 IST

ಮಂಗಳೂರು, ಅ.15: ಪೇಸ್ ಶಿಕ್ಷಣ ಸಂಸ್ಥೆಗಳು 25ನೆ ವರ್ಷದ ಸಂಭ್ರಮದಲ್ಲಿದ್ದು, ‘ಪೇಸ್ ಸಿಲ್ವಿಯೋರಾ 2025’ ಹೆಸರಿನಲ್ಲಿ ಡಿಸೆಂಬರ್ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಿಎ ಎಜುಕೇಶನಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಅಬ್ದುಲ್ಲಾ ಇಬ್ರಾಹೀಂ ತಿಳಿಸಿದ್ದಾರೆ.

ಬುಧವಾರ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, 2000ದಲ್ಲಿ ಮಂಗಳೂರಿನ ಪಿ.ಎ. ಇಂಜಿನಿಯರಿಂಗ್ ಕಾಲೇಜಿನೊಂದಿಗೆ ಆರಂಭಗೊಂಡ ಪೇಸ್ ಇಂದು, ಯುಎಇ, ಭಾರತ ಮತ್ತು ಕುವೈತ್ ಗಳಲ್ಲಿ 20 ಸಂಸ್ಥೆಗಳ ಜಾಗತಿಕ ಜಾಲವಾಗಿ ಬೆಳೆದಿದೆ ಎಂದರು.

ಪೇಸ್ ಗ್ರೂಪ್ ಭಾರತದಲ್ಲಿನ ರಿಮ್ಸ್ ಇಂಟರ್ ನ್ಯಾಶನಲ್ ಸ್ಕೂಲ್ ಕಣ್ಣೂರು ಮತ್ತು ವೆಸ್ಟ್ ಲಂಡನ್ ವಿಶ್ವವಿದ್ಯಾನಿಲಯ, ರಾಸ್ ಅಲ್ ಖೈಮಾಗಳಲ್ಲಿ ಪಾಲುದಾರಿಕೆಯನ್ನು ಹೊಂದಿದೆ. ಪೇಸ್ ಸಿಲ್ವಿಯೋರಾ ಕಾರ್ಯಕ್ರಮದ ಬ್ಯಾನರ್ ಡ್ರಾಪ್ ಹಾಗೂ ಕಾರ್ಯಕ್ರಮಗಳ ಉದ್ಘಾಟನೆ ಅ.14ರಂದು ಪೇಸ್ ನಾಲೆಡ್ಜ್ ಸಿಟಿ ಕ್ಯಾಂಪಸ್ನಲ್ಲಿ ನಡೆದಿದೆ. ಮೂರು ತಿಂಗಳ ಉತ್ಸವ ‘ಒಂದು ಪರಂಪರೆಯನ್ನು ಗೌರವಿಸುವುದು, ಭವಿಷ್ಯವನ್ನು ಬೆಳಗಿಸುವುದು’ ಎಂಬ ಥೀಮ್ ನಡಿ ವಿವಿಧ ವಿಭಾಗಗಳಲ್ಲಿ ನಡೆಯಲಿದೆ. ಸಂಭ್ರಮದ ಅಂಗವಾಗಿ ಆಹ್ವಾನಿತ ಉಪನ್ಯಾಸ ಸರಣಿ, ಹಳೆಯ ವಿದ್ಯಾರ್ಥಿಗಳ ಉಪನ್ಯಾಸ ಸರಣಿ, ಹಣಕಾಸು ಜಾಗೃತಿ ಕಾರ್ಯಕ್ರಮಗಳು, ಸೈಬರ್ ಮತ್ತು ಡ್ರಗ್ಸ್ ಜಾಗೃತಿ ಅಭಯಾನಗಳು, ವೃತ್ತಿ ಮಾರ್ಗದರ್ಶನ ಮತ್ತು ನವೀನತೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಆರೋಗ್ಯ, ರಕ್ತದಾನ ಶಿಬಿರ, ಕ್ಯಾನ್ಸರ್ ಜಾಗೃತಿ ಅಭಿಯಾನ, ವೃದ್ಧಾಶ್ರಮ ಭೇಟಿ, ಹೈಜಿನ್ ಮತ್ತು ಗಿಡ ನೆಡುವ ಕಾರ್ಯಕ್ರಮ ಮತ್ತು ಫಿಟ್ನೆಸ್ ಚಾಲೆಂಜ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸಿಬಂ್ಬದಿ, ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳಿಗಾಗಿ ಕ್ರೀಡಾ ಚಟುವಟಿಕೆಗಳು, ಗೌರವ ಮತ್ತು ಸನ್ಮಾನಗಳ ಬಳಿಕ ಡಿಸೆಂಬರ್ ಅಂತ್ಯದಲ್ಲಿ ಫೈನ್ ಕಾರ್ಯಕ್ರಮ ಮಂಗಳೂರಿನ ಪೇಸ್ ನಾಲೆಡ್ಜ್ ಸಿಟಿ ಕ್ಯಾಂಪಸ್ ನಲ್ಲಿ ಹಾಗೂ ಗ್ರಾಂಡ್ ಫೈನಲ್ ಕಾರ್ಯಕ್ರಮ ಜನವರಿ 24ರಂದು ದುಬೈನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕ್ಯಾಂಪಸ್ ಎಜಿಎಂ ಶರಫುದ್ದೀನ್ ಪಿ.ಕೆ., ಪಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ರಮೀಸ್ ಎಂ.ಕೆ., ಪಿಎ ಫಸ್ಟ್ ಗ್ರೇಡ್ ಕಾಲೇಜಿನ ಪ್ರಾಂಶುಪಾಲ ಡಾ.ಸರ್ಫರಾಝ್ ಜೆ. ಹಸೀಂ, ಪಿಎ ಕಾಲೇಜ್ ಆಫ್ ಫಾರ್ಮಸಿ ಪ್ರಾಂಶುಪಾಲ ಡಾ. ಸಲೇಮುಲ್ಲಾ ಖಾನ್, ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ.ಸಯ್ಯದ್ ಅಮೀನ್ ಅಹ್ಮದ್, ಪಿಎ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಪ್ರಾಂಶುಪಾಲ ಡಾ.ಅಫೀಫಾ ಸಲೀಂ, ಪಿಎ ಪಾಲಿಟೆಕ್ನಿಕ್ ಪ್ರಾಂಶುಪಾಲ ಪ್ರೊ.ಇಸ್ಮಾಯೀಲ್ ಖಾನ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News