×
Ad

ಕೊಣಾಜೆಯ ಯುವಕ ಅಬುಧಾಬಿಯಲ್ಲಿ ಮೃತ್ಯು

Update: 2024-08-13 23:10 IST

ನೌಫಲ್

ಕೊಣಾಜೆ: ಕೊಣಾಜೆ ಗ್ರಾಮದ ನಡುಪದವಿನ ಯುವಕನೋರ್ವ ಅಬುಧಾಬಿಯಲ್ಲಿ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.

ಮೃತಪಟ್ಟ ಯುವಕನನ್ನು ಉಮ್ಮರ್ ಎಂಬವರ ಪುತ್ರ ನೌಫಲ್(25) ಎಂದು ಗುರುತಿಸಲಾಗಿದೆ.

ಅಬುಧಾಬಿಯಲ್ಲಿ ಎ.ಸಿ ಮೆಕ್ಯಾನಿಕ್ ಆಗಿ ಉದ್ಯೋಗದಲ್ಲಿದ್ದ ನೌಫಲ್ ಕಟ್ಟಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ನೌಫಲ್ ಅವರು ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ನಝರ್ ಷಾ ಪಟ್ಟೋರಿ ಅವರ ಸಹೋದರನಾಗಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News